ನಾಮಪತ್ರ ಹಿಂಪಡೆಯಲು ಲಂಚ ಪ್ರಕರಣ | ಮಂಜೇಶ್ವರದಲ್ಲಿ ಸಾಕ್ಷ್ಯ ಸಂಗ್ರಹಿಸಿದ ಕ್ರೈಂ ಬ್ರಾಂಚ್

Prasthutha|

ಆರೋಪಿಯನ್ನು ಹೋಟೆಲ್ ಗೆ ಕರೆತಂದ ಪೊಲೀಸರು

- Advertisement -

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿ ಕೆ. ಸುಂದರ ಅವರ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಕ್ರೈಂ ಬ್ರಾಂಚ್ ವಿಚಾರಣೆಯನ್ನು ಚುರುಕುಗೊಳಿಸಿದ್ದು, ಪ್ರಮುಖ ಸಾಕ್ಷಿ ಮತ್ತು ಪ್ರಕರಣದ ಆರೋಪಿಯೂ ಆಗಿರುವ ಕೆ. ಸುಂದರ ಅವರನ್ನು ಜಿಲ್ಲಾ ಕ್ರೈಂ ಬ್ರಾಂಚ್ ಅಡುಕತ್ತ್ ಬಯಾಲ್ ಹೋಟೆಲ್ ಗೆ ಕರೆತಂದು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಅಡುಕತ್ತ್ ಬಯಾಲ್ ಹೋಟೆಲ್ ನಲ್ಲಿ ನಾಮಪತ್ರ ಹಿಂತೆಗೆದುಕೊಳ್ಳಲು ಅರ್ಜಿಗೆ ಸಹಿ ಹಾಕಲಾಗಿದ್ದು, ಕೊಡಕ್ಕರ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿರುವ ಸುನಿಲ್ ನಾಯ್ಕ್ ಸೇರಿದಂತೆ ಬಿಜೆಪಿ ನಾಯಕರು ಹೋಟೆಲ್ ನಲ್ಲಿ ಹಾಜರಿದ್ದರು ಎಂದು ಕೆ. ಸುಂದರ ಹೇಳಿದ್ದಾರೆ.

- Advertisement -

ಮಂಜೇಶ್ವರದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಸುರೇಂದ್ರನ್ ತಂಗಿದ್ದ ಅಡುಕತ್ತ್ ಬಯಾಲ್ ಹೋಟೆಲ್ ಗೆ ಆಗಮಿಸಿದ ಪೊಲೀಸರು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಈ ಹೋಟೆಲ್ ನಲ್ಲಿಯೇ ನಾಮಪತ್ರಿಕೆ ಹಿಂತೆಗೆದುಕೊಳ್ಳಲು ಅರ್ಜಿಗೆ ಸಹಿ ಹಾಕಿರುವುದಾಗಿ ಕೆ ಸುಂದರ ಸ್ಪಷ್ಟಪಡಿಸಿದ್ದಾರೆ.

ಬಿಎಸ್ಪಿ ಅಭ್ಯರ್ಥಿಗೆ ನಾಮಪತ್ರ ಹಿಂಪಡೆಯಲು ಆಮಿಷವೊಡ್ಡಿದ್ದ ಆರೋಪ ಹಿನ್ನೆಲೆಯಲ್ಲಿ ಕೆ. ಸುರೇಂದ್ರನ್ ವಿರುದ್ಧ FIR ದಾಖಲಿಸುವಂತೆ ಕೋರ್ಟ್ ಈ ಹಿಂದೆ ಆದೇಶಿಸಿತ್ತು.

Join Whatsapp