ಮನಿ ಲಾಂಡರಿಂಗ್ ಕೇಸ್| ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಫೂರ್ ಗೆ ಜಾಮೀನು

Prasthutha|

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಫೂರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

- Advertisement -

ರಾಣಾ ಕಪೂರ್ ಅವರನ್ನು ಮಾರ್ಚ್ 2020 ರಲ್ಲಿ ಬಂಧಿಸಲಾಗಿತ್ತು.  ರಾಣಾ ಕಪೂರ್ ಮತ್ತು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (DHFL) ಪ್ರೊಮೋಟರ್ ಗಳಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ 5,050 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿರುವುದಾಗಿ ಇಡಿ ಪತ್ತೆ ಮಾಡಿತ್ತು.

ಸದ್ಯ ಜೈಲಿನಲ್ಲಿರುವ ರಾಣಾ ಕಫೂರ್ ಅವರು ತಮ್ಮ ಆರೋಗ್ಯ ಸ್ಥಿತಿಯನ್ನು ಉಲ್ಲೇಖಿಸಿ ಈ ಹಿಂದೆ ಮಧ್ಯಂತರ ಜಾಮೀನು ಕೋರಿದ್ದರು. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು.

Join Whatsapp