January 14, 2021

ಯಡಿಯೂರಪ್ಪನವರ ನೋಡಲಾಗದಂತಹ CDಯೂ ಇದೆ : ಯತ್ನಾಳ್ ಸ್ಫೋಟಕ ಆರೋಪ

ಬಾಗಲಕೋಟೆ : ರಾಜ್ಯ ರಾಜಕಾರಣದಲ್ಲಿ ಮತ್ತೆ ಸಿಡಿ ರಾಜಕಾರಣ ಸದ್ದು ಮಾಡುತ್ತಿದೆ. ಈ ಬಾರಿ ಸಿಎಂ ಯಡಿಯೂರಪ್ಪ ವಿರುದ್ಧ ಸ್ವಪಕ್ಷೀಯರೇ ಸಿಡಿ ಬಗ್ಗೆ ಮಾತನಾಡುತ್ತಿದ್ದಾರೆ. ಸಿಡಿಯಲ್ಲಿ ಸಿಎಂ ಯಡಿಯೂರಪ್ಪನವರ ಭ್ರಷ್ಟಾಚಾರ ಮಾತ್ರ ಇಲ್ಲ. ನೋಡಲು ಆಗದಂತಹ ಸಿಡಿಗಳೂ ಇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಯತ್ನಾಳ್, ನಾನು ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದ್ದೇನೆ. ನನ್ನ ಬಳಿ 3 ಜನ ಬಂದಿದ್ದು, ಅವರ ಬಳಿ ಸಿಡಿಗಳಿವೆ. ಸಿಡಿಗಳನ್ನೆಲ್ಲ ಇಟ್ಟುಕೊಂಡು ಆಟವಾಡುವ ವ್ಯಕ್ತಿ ನಾನಲ್ಲ. ಅಂತಹ ಸಿಡಿ ಇಟ್ಕೊಂಡು ನಾನು ಆಟ ಆಡುವವನಾಗಿದ್ದರೆ, ಇಂದು ಡಿಸಿಎಂ ಆಗಿರುತ್ತಿದ್ದೆ ಎಂದಿದ್ದಾರೆ.

ಡಿಕೆಶಿ, ಜಾರ್ಜ್, ಜಮೀರ್ ಅಹ್ಮದ್ ಬಳಿಯೂ ಆ ಸಿಡಿಗಳಿವೆ. ನೀವು ಯಡಿಯೂರಪ್ಪ, ವಿಜಯೇಂದ್ರನವರ ಜೊತೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿಲ್ಲ ಎಂದಾದರೆ, ಆ ಸಿಡಿ ಬಹಿರಂಗಗೊಳಿಸಿ. ಕಾಂಗ್ರೆಸ್ ನವರಿಗೆ ನೈತಿಕತೆ ಇದ್ದರೆ, ನಿಜವಾದ ವಿಪಕ್ಷ ಸ್ಥಾನದಲ್ಲಿ ಅವರಿದ್ದರೆ ಆ ಸಿಡಿಗಳನ್ನು ರಿಲೀಸ್ ಮಾಡಲಿ ಎಂದು ಯತ್ನಾಳ್ ಸವಾಲು ಹಾಕಿದ್ದಾರೆ.   

ಟಾಪ್ ಸುದ್ದಿಗಳು

ವಿಶೇಷ ವರದಿ