January 14, 2021

ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಲೈಂಗಿಕ ಕಿರುಕುಳ | ಬಿಜೆಪಿ ಮುಖಂಡನ ಬಂಧನ

ಲಖನೌ : ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದ ಮೇರೆಗೆ ಬಿಜೆಪಿ ಮುಖಂಡನನ್ನು ಬುಧವಾರ ಪೊಲೀಸರು ಬಂಧಿದ್ದಾರೆ. ಬಿಜೆಪಿ ಕಚೇರಿ ಅಧ್ಯಕ್ಷನಾಗಿದ್ದ ರಾಮ್ ಬಿಹಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಜಲೌನ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಿಜೆಪಿಗೆ ಸೇರುವ ಮೊದಲು ರಾಮ್ ಬಿಹಾರಿ ಕಂದಾಯ ಅಧಿಕಾರಿಯಾಗಿದ್ದು, 2017ರಲ್ಲಿ ನಿವೃತ್ತಿಯಾಗಿ ರಾಜಕೀಯ ಸೇರಿದ್ದ ಎನ್ನಲಾಗಿದೆ. ಈತ ಅಪ್ರಾಪ್ತ ವಯಸ್ಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ಅದನ್ನು ತನ್ನ ಕೊಠಡಿಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿದ್ದ ಎಂದು ವರದಿಯೊಂದು ತಿಳಿಸಿದೆ.

ಏಳು ಬಾಲಕರಿಗೆ ಈತ ಕಿರುಕುಳ ನೀಡಿದ್ದಾನೆಂದು ದೂರು ಕೇಳಿಬಂದಿದೆ. ದಿನಗೂಲಿ ಕೆಲಸ ಮಾಡುವವರ ಮಕ್ಕಳನ್ನು ಗುರಿಯಾಗಿಸಿ ಈತ ದುಷ್ಕೃತ್ಯ ಎಸಗುತ್ತಿದ್ದನು ಎನ್ನಲಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಮತ್ತು ಪ್ರಾಥಮಿಕ ಸದಸ್ಯತ್ವವನ್ನೂ ರದ್ದುಪಡಿಸಲಾಗಿದೆ.  

ಟಾಪ್ ಸುದ್ದಿಗಳು

ವಿಶೇಷ ವರದಿ