ಯಾಸೀನ್ ಮಲಿಕ್ ಗೆ ಜೀವಾವಧಿ ಶಿಕ್ಷೆ

Prasthutha|

ನವದೆಹಲಿ: ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಯಾಸೀನ್ ಮಲಿಕ್ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.

- Advertisement -

ಈ ಮಧ್ಯೆ ತನಿಖಾ ಸಂಸ್ಥೆಯು ಮರಣದಂಡನೆಗೆ ಒಳಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಆದರೆ ಪ್ರತಿವಾದಿ ವಕೀಲರು ಜೀವಾವಧಿ ಶಿಕ್ಷೆ ವಿಧಿಸುವಂತೆ ಮಾಡಿತ್ತು.

ಸದ್ಯ ನ್ಯಾಯಾಲಯವು ಎರಡು ಜೀವಾವಧಿ ಶಿಕ್ಷೆ ಮತ್ತು ತಲಾ 10 ವರ್ಷಗಳ ಕಠಿಣ ಸಜೆಯ ಜೊತೆಗೆ 10 ಲಕ್ಷಕ್ಕೂ ಅಧಿಕ ಮೊತ್ತದ ದಂಡವನ್ನು ವಿಧಿಸಲಾಗಿದೆ ಎಂದು ಹಿರಿಯ ವಕೀಲ ಉಮೇಶ್ ಶರ್ಮಾ ತಿಳಿಸಿದ್ದಾರೆ.

- Advertisement -

ಈ ನಡುವೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ಯಾಸೀನ್ ಮಲಿಕ್ ಅವರಿಗೆ ಅವಕಾಶವಿದೆ.

ಭಯೋತ್ಪಾದನೆಗೆ ನಿಧಿ ಪೂರೈಕೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಬಂಧಿತ ಯಾಸೀನ್ ಮಲಿಕ್ ತನ್ನ ಮೇಲಿದ್ದ ಎಲ್ಲಾ ಆರೋಪಗಳನ್ನು ಈ ಹಿಂದೆ ತಪ್ಪೊಪ್ಪಿಕೊಂಡಿದ್ದರು. ದೆಹಲಿಯ ವಿಶೇಷ ಎನ್.ಐ.ಎ ನ್ಯಾಯಾಲಯವು ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

Join Whatsapp