ಕೇರಳ ಚರ್ಚ್ ಮೇಲೆ IT ದಾಳಿ | ವಿದೇಶಿ ದೇಣಿಗೆ ಹಣ ಬೇರೆ ಉದ್ದೇಶಕ್ಕೆ ಬಳಸಿದ ಆರೋಪ

Prasthutha|

ತಿರುವನಂತಪುರಂ : ಕೇರಳದ ತಿರುವಳ್ಳ ಮೂಲದ ಚರ್ಚ್ ಒಂದರ ಮೇಲೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ದಾಳಿ ನಡೆಸಿದ್ದು, ಚ್ಯಾರಿಟಿ ಉದ್ದೇಶದ ಅನುದಾನವನ್ನು ಬೇರೆ ಕಾರ್ಯಗಳಿಗೆ ವರ್ಗಾಯಿಸಿದ ಆರೋಪಗಳ ಕುರಿತು ತನಿಖೆ ನಡೆಸಿದೆ. ಕೆ.ಪಿ. ಯೊಹಾನ್ನನ್ ಮುಖ್ಯಸ್ಥಿಕೆಯ ಬಿಲೀವರ್ಸ್ ಈಸ್ಟರ್ನ್ ಚರ್ಚ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ಗುರುವಾರ ಆರಂಭವಾಗಿದೆ ಮತ್ತು ಕೇರಳ ಹಾಗೂ ದೇಶದ ವಿವಿಧೆಡೆ ಮುಂದುವರಿದಿದೆ. ಇಲ್ಲಿ ವರೆಗೆ 8 ಕೋಟಿ ರೂ. ನಗದು ವಿವಿಧ ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ. ನಮ್ಮ ಪ್ರಕ್ರಿಯೆ ಇನ್ನೂ ಮುಂದುವರಿದಿದೆ ಎಂದು ಐಟಿ ಮೂಲಗಳು ತಿಳಿಸಿವೆ.

- Advertisement -

ಚ್ಯಾರಿಟಿ ಉದ್ದೇಶಕ್ಕಾಗಿ ಪಡೆದ ವಿದೇಶಿ ದೇಣಿಗೆಯನ್ನು ಧಾರ್ಮಿಕ ಚಟುವಟಿಕೆಗಳಿಗಾಗಿ ಬಳಸಿದ ಆರೋಪವಿದ್ದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ಈ ಚರ್ಚ್ ಗೆ ಎಫ್ ಸಿಆರ್ ಎ ಅನುದಾನವನ್ನು ರದ್ದುಪಡಿಸಿದೆ.

ಚರ್ಚ್ ಇಲ್ಲಿ ವರೆಗೆ ಸುಮಾರು 4,000 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ದೊಡ್ಡ ಮೊತ್ತವೊಂದು ಸಂಸ್ಥೆಯ ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಕೆಯಾಗಿದೆ ಎನ್ನಲಾಗಿದೆ. ಐಟಿ ಅಧಿಕಾರಿಗಳು ಕಳೆದ 10 ವರ್ಷಗಳ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -