ಇನ್ಶೂರನ್ಸ್ ಇಲ್ಲದ ಖಾಸಗಿ ಬಸ್ ಗಳ ಓಡಾಟದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಾಗಿ ಬೇಜವಾಬ್ದಾರಿತನ ಉತ್ತರ ನೀಡಿದ ಯಡಿಯೂರಪ್ಪ !

Prasthutha|

►ವೀಡಿಯೋ ವೀಕ್ಷಿಸಿ

- Advertisement -

ಬೆಂಗಳೂರು : ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರದಿಂದಾಗಿ ಜನ ಸಾಮಾನ್ಯರ ದೈನಂದಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಸರಕಾರ ತನ್ನ ಹಠಮಾರಿತನದ ಧೋರಣೆಯನ್ನು ಮುಂದುವರಿಸಿದೆ.  ಈ ನಡುವೆ ಸರ್ಕಾರಿ ಬಸ್ಸುಗಳ ಬದಲಿಗೆ ಖಾಸಗಿ ಬಸ್ಸುಗಳಿಗೆ ಅವಕಾಶ ನೀಡಿದ್ದು, ಅವರು ಪರವಾನಿಗೆ ಇಲ್ಲದೆ, ಇನ್ಶೂರನ್ಸ್ ಇಲ್ಲದೆ ನಗರದಲ್ಲಿ ಓಡಾಟ ನಡೆಸುತ್ತಿದ್ದಾರೆ. ಈ ಕುರಿತು ಇಂದು ಮಾಧ್ಯಮ ಪತ್ರಕರ್ತನೋರ್ವ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಪ್ರಶ್ನಿಸಿದಾಗ ಸಿಟ್ಟಾದ ಅವರು, “ಈ ಕುರಿತು ನೀನೇನೂ ತಲೆ ಕೆಡಿಸಿಕೊಳ್ಳಬೇಡ. ನಮಗೆ ಗೊತ್ತಿದೆ ಎಲ್ಲಾ. ನೀನೇನು ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ. ನಮಗ್ಗೊತ್ತು ಸರ್ಕಾರ ಹೇಗೆ ನಡೆಸಬೇಕು ಅಂತ” ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ.

ಆರು ಕೋಟಿಗಿಂತಲೂ ಹೆಚ್ಚಿನ ರಾಜ್ಯದ ಜನತೆಯ ಜವಾಬ್ದಾರಿ ಹೊತ್ತಿರುವ ರಾಜ್ಯದ ಮುಖ್ಯಮಂತ್ರಿಯೋರ್ವರ ಈ ರೀತಿಯ ಬೇಜವಬ್ದಾರಿತನದ ಹೇಳಿಕೆಗೆ ಎಲ್ಲರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮೆಯಿಲ್ಲದ ಬಸ್ಸುಗಳು ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ.

Join Whatsapp