ಕೊಲ್ಕತಾ : ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ತಂದೆ ಮತ್ತು ಸಹೋದರನಿಗೆ ಕೇಂದ್ರ ಗೃಹ ಸಚಿವಾಲಯ ವೈ ಪ್ಲಸ್ ಭದ್ರತೆ ಒದಗಿಸಿದೆ.
ಸುವೇಂದು ಅಧಿಕಾರಿಯ ತಂದೆ ಸಿಸಿರ್ ಕುಮಾರ್ ಅಧಿಕಾರಿ ಮತ್ತು ಸಹೋದರ ದಿಬ್ಯೇಂದು ಅಧಿಕಾರಿ ಅವರಿಗೆ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಈ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ. ಸಿಸಿರ್ ಕುಮಾರ್ ಅಧಿಕಾರಿ ಕಾಂತಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಸಹೋದರ ದಿಬ್ಯೇಂದು ತಮ್ಲುಕ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಸದಸ್ಯರಾಗಿದ್ದಾರೆ.
ಇಬ್ಬರಿಗೂ ತಲಾ ೪-೫ ಸಶಸ್ತ್ರಧಾರಿ ಕಮಾಂಡೊಗಳು ಭದ್ರತೆ ಒದಗಿಸಲಿದ್ದಾರೆ.