ತನಗೆ ಓಟು ಹಾಕದ ಗ್ರಾಮಸ್ಥರನ್ನು ಥಳಿಸಿದ ಬಜರಂಗ ದಳ ನಾಯಕ

Prasthutha|

ಬುಲಂದ್‌ ಶಹರ್‌ : ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ತನಗೆ ಮತ ಹಾಕದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಉತ್ತರ ಪ್ರದೇಶದ ಬುಲಂದ್‌ ಶಹರ್‌ ನ ಬಿಜೆಪಿ ಪರ ಸಂಘಟನೆ ಬಜರಂಗ ದಳ ನಾಯಕ ಯೋಗೇಶ್‌ ರಾಜ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಯೋಗೇಶ್‌ ರಾಜ್‌ ಮತ್ತು ಆತನ ಜೊತೆಗಿದ್ದ ಆರು ಮಂದಿ ಸಹಚರರ ವಿರುದ್ಧ ದೂರು ದಾಖಲಾಗಿದೆ. ಯೋಗೇಶ್‌ ರಾಜ್‌ ನನ್ನು ಪ್ರಮುಖ ಆರೋಪಿಯಾಗಿ ಗುರುತಿಸಲಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಯೋಗೇಶ್‌ ರಾಜ್‌ ಸ್ಪರ್ಧಿಸಿ ಗೆದ್ದಿದ್ದ.

- Advertisement -

ನಯಾಬಾನ್ಸ್‌ ಗ್ರಾಮದಲ್ಲಿ ದಿನೇಶ್‌ ಕುಮಾರ್‌ ಎಂಬವರು ಮತ್ತು ಅವರ ಕುಟುಂಬಸ್ಥರ ಮೇಲೆ ಯೋಗೇಶ್‌ ಮತ್ತು ಆತನ ಸಹಚರರು ದಾಳಿ ಮಾಡಿರುವ ವೀಡಿಯೊ ವೈರಲ್‌ ಆಗಿತ್ತು.

೨೦೧೮ರಲ್ಲಿ ಬುಲಂದ್‌ ಶಹರ್‌ ನ ಸಿಯಾನದಲ್ಲಿ ನಡೆದ ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಿಂಸಾಚಾರದ ಪ್ರಕರಣದಲ್ಲೂ ಯೋಗೇಶ್‌ ಆರೋಪಿಯಾಗಿದ್ದು, ಜಾಮೀನಿನ ಆಧಾರದಲ್ಲಿ ಹೊರಗೆ ತಿರುಗಾಡುತ್ತಿದ್ದಾನೆ. ಈ ಗಲಭೆಯಲ್ಲಿ ಸಿಯಾನ ಠಾಣೆಯ ಪೊಲೀಸ್‌ ಅಧಿಕಾರಿ ಮತ್ತು ಓರ್ವ ಯುವಕನ ಹತ್ಯೆ ನಡೆದಿತ್ತು.

- Advertisement -