ಸಂವಿಧಾನ ವಿರೋಧಿ ಹೇಳಿಕೆ | ಶಾಸಕ ಯತ್ನಾಳ್ ಗಡಿಪಾರಿಗೆ ವೆಲ್ಫೇರ್ ಪಾರ್ಟಿ ಆಗ್ರಹ

Prasthutha|

ಬೆಂಗಳೂರು : ಮತೀಯ ಭಾವನೆಗಳಿಗೆ ಧಕ್ಕೆ ತರುವಂತಹ, ಸಮಾಜದಲ್ಲಿ ಗಲಭೆಗೆ ಕಾರಣವಾಗುವಂತಹ, ಒಂದು ಕೋಮನ್ನು ಪದೇಪದೇ ನಿಂದನೆ ಮಾಡುವಂತಹ, ಸಂವಿಧಾನಬಾಹಿರ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ಅಡ್ವೊಕೇಟ್ ತಾಹೀರ್ ಹುಸೇನ್ ಒತ್ತಾಯಿಸಿದ್ದಾರೆ.

- Advertisement -

ಯತ್ನಾಳ್ ಹೇಳಿಕೆಗಳು ಕಾನೂನು ಬಾಹಿರ ಹಾಗೂ ದೇಶ ವಿರೋಧಿ ಆಗಿವೆ. ಸರಕಾರ ಇಂತಹ ಅರಾಜಕ ಹೇಳಿಕೆ ನೀಡಿ ಸಮಾಜದ ಶಾಂತಿ ಭಂಗ ಮಾಡುತ್ತಿರುವ ಯತ್ನಾಳ್ ರನ್ನು ಕೂಡಲೇ ಬಂಧಿಸಬೇಕು. ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಯತ್ನಾಳ್ ರ ದೇಶ ವಿರೋಧಿ ಹೇಳಿಕೆಗಳಿಗೆ ಸರಕಾರದ ಮೌನ, ರಾಜ್ಯ ದಲ್ಲಿ ಕಾನೂನು ಸುವೆಸ್ಥೆ ಯಾವ ಸ್ಥಿತಿ ಯಲ್ಲಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ಟೀಕಿಸಿದರು.

ವಿಪಕ್ಷಗಳಿಗೆ, ಸ್ವಾಮೀಜಿಗಳಿಗೆ, ಅಲ್ಪಸಂಖ್ಯಾತರಿಗೆ ಈ ರೀತಿ ನಿಂದನೆ ಮಾಡುತ್ತಿರುವ ಯತ್ನಾಳ್ ಗೆ ರಾಜ್ಯ ದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಆರಾಜಕತೆ ಸೃಷ್ಟಿಯಾಗುತ್ತದೆ.

- Advertisement -

ಪದೇಪದೇ ಅಲ್ಪಸಂಖ್ಯಾತ ಸಮಾಜಕ್ಕೆ ಟಾರ್ಗೆಟ್ ಮಾಡಿ ಹೇಳಿಕೆ ನೀಡುವುದು ಎಷ್ಟು ಸರಿ ? ಕೂಡಲೇ ಶಾಸಕ ಯತ್ನಾಳ್ ವಿರುದ್ಧ ಸರಕಾರ ಕ್ರಮ ಜರುಗಿಸಬೇಕು ಎಂದು ತಾಹೇರ್ ಹುಸೇನ್ ಒತ್ತಾಯಿಸಿದರು.

Join Whatsapp