ದುಬೈ ಎಕ್ಸ್ ಪೋ-2020ರಲ್ಲಿ ವಿಶ್ವದ ಅತಿದೊಡ್ಡ ಕುರ್ ಆನ್ ಪ್ರದರ್ಶನ

Prasthutha|

ದುಬೈ: ಮುಂದಿನ ತಿಂಗಳು ದುಬೈಯಲ್ಲಿ ನಡೆಯುವ “ಎಕ್ಸ್ ಪೋ 2020 ದುಬೈ” ನಲ್ಲಿ ವಿಶ್ವದ ಅತಿದೊಡ್ಡ ಕುರ್ ಆನ್ ಪ್ರದರ್ಶನಗೊಳ್ಳಲಿದೆ.

- Advertisement -


1,400 ವರ್ಷಗಳ ಇಸ್ಲಾಮಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಲ್ಯೂಮಿನಿಯಂ ಮತ್ತು ಚಿನ್ನ ಲೇಪಿತ ಲಿಪಿಯಲ್ಲಿ ಬರೆದಿರುವ ಈ ಕುರ್ ಆನ್ ಪ್ರದರ್ಶನಗೊಳ್ಳಲಿದೆ. ಸಾಂಪ್ರದಾಯಿಕವಾಗಿ, ಇದುವರೆಗೆ ಪವಿತ್ರ ಕುರಾನ್ ಅನ್ನು ಕಾಗದ, ಬಟ್ಟೆ ಅಥವಾ ಚರ್ಮದ ಮೇಲೆ ಬರೆಯಲಾಗಿತ್ತು.
ಆದರೆ ಪಾಕಿಸ್ತಾನದ ಕಲಾವಿದ, ಯುಎಇಯ ಮಾಜಿ ವಲಸಿಗ ಶಾಹಿದ್ ರಸ್ಸಮ್ ಅವರು ಪವಿತ್ರ ಕುರ್‌ಆನ್‌ ಅನ್ನು ಹೊಸ ಪರಿಕಲ್ಪನೆಯೊಂದಿಗೆ ಅಲ್ಯೂಮಿನಿಯಂ ಮತ್ತು ಚಿನ್ನದ ಲೇಪಿತ ಅಕ್ಷರಗಳನ್ನು ಉನ್ನತ ಗುಣಮಟ್ಟದ ಕ್ಯಾನ್ವಾಸ್‌ನಲ್ಲಿ ಬರೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸುತ್ತಿದ್ದಾರೆ.


ಪ್ರಶಸ್ತಿ ವಿಜೇತ ಕಲಾವಿದ, ಅನೇಕ ಅಂತಾರಾಷ್ಟ್ರೀಯ ಮನ್ನಣೆಗಳನ್ನು ಪಡೆದಿರುವ ಶಾಹಿದ್ ರಸ್ಸಮ್ ಅವರು ಐದು ವರ್ಷಗಳ ಹಿಂದೆ ‘ಉದಾತ್ತ’ ಈ ಯೋಜನೆಯನ್ನು ಆರಂಭಿಸಿದರು. ದುಬೈನಲ್ಲಿ ಆರು ತಿಂಗಳ ಕಾಲ ನಡೆಯುವ ವಿಶ್ವ ವಸ್ತು ಪ್ರದರ್ಶನದಲ್ಲಿ ತಮ್ಮ ಯೋಜನೆಯನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ.
2000 ರಲ್ಲಿ ಯುಎಇ ಅಲ್ ಐನ್ ವಿಶ್ವವಿದ್ಯಾಲಯದಿಂದ ವರ್ಷದ ಕಲಾವಿದ ಪ್ರಶಸ್ತಿಯನ್ನು ಪಡೆದಿರುವ ರಸ್ಸಮ್ ಈಗಾಗಲೇ ಅಲ್ಲಾಹನ 99 ಹೆಸರುಗಳನ್ನು ಅಲ್ಯೂಮಿನಿಯಂ ಮತ್ತು ಚಿನ್ನದ ಲೇಪಿತ ಪದಗಳಿಂದ ಕೆತ್ತಿ ಗಮನ ಸೆಳೆದಿದ್ದಾರೆ.
ಚೌಕಟ್ಟನ್ನು ಹೊರತುಪಡಿಸಿ, ಪವಿತ್ರ ಕುರ್‌ಆನ್‌ನ ಗಾತ್ರವು 8.5 ಅಡಿ ಎತ್ತರ ಮತ್ತು 6.5 ಅಡಿ ಅಗಲವಿದೆ. ಒಂದು ಪುಟದಲ್ಲಿ 150 ಪದಗಳನ್ನು ಹೊಂದಿದೆ. ಒಟ್ಟು 550 ಪುಟಗಳಿವೆ. ಇದು ಪಾಕಿಸ್ತಾನದ ಕರಾಚಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಕಲಾವಿದರೊಬ್ಬರು ತಿಳಿಸಿದರು.

- Advertisement -


ಪ್ರಸ್ತುತ, ಅತಿದೊಡ್ಡ ಮುದ್ರಿತ ಕುರಾನ್ 6.74 ಅಡಿ ಎತ್ತರ ಮತ್ತು 4.11 ಅಡಿ ಅಗಲ ಮತ್ತು 6.69 ಇಂಚು ದಪ್ಪವನ್ನು ಹೊಂದಿದೆ. ಇದು 632 ಪುಟಗಳನ್ನು ಹೊಂದಿದ್ದು, 552.74 ಕೆಜಿ ತೂಗುತ್ತದೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳು ಹೇಳುತ್ತವೆ.
“ದುಬೈ ಮೂಲದ ಪಾಕಿಸ್ತಾನಿ ಉದ್ಯಮಿ ಇರ್ಫಾನ್ ಮುಸ್ತಫಾ ಅವರು ಎಕ್ಸ್‌ ಪೋ 2020 ದುಬೈನಲ್ಲಿ ಈ ಅದ್ಭುತ ಕುರ್ ಆನ್ ಅನ್ನು ಪ್ರದರ್ಶಿಸಲು ಕಲಾವಿದರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದಾರೆ” ಎಂದು ಕಲಾವಿದ ತಿಳಿಸಿದ್ದಾರೆ.



Join Whatsapp