ಬೆಂಗಳೂರು ಭೀಕರ ರಸ್ತೆ ಅಪಘಾತ| ನಿರ್ಲಕ್ಷ್ಯದ ಚಾಲನೆ ಘಟನೆ ಕಾರಣ: ಪೊಲೀಸ್ ಆಯುಕ್ತ ರವಿಕಾಂತೇಗೌಡ

Prasthutha|

ಬೆಂಗಳೂರು: ಕೋರಮಂಗಲದಲ್ಲಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿಯ ಸಾವನ್ನಪ್ಪಿದ್ದು, ನಿರ್ಲಕ್ಷ್ಯದ ಚಾಲನೆ ಘಟನೆ ಕಾರಣ ಎಂದು  ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಆಡಿ ಕಾರು ನಿಯಂತ್ರಣ ತಪ್ಪಿ ನೇರವಾಗಿ ಫುಟ್ ಪಾತ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನಜ್ಜುಗುಜ್ಜಾಗಿದೆ. ಯಾರು ಕೂಡ ಸೀಟ್ ಬೆಲ್ಟ್ ಹಾಕದ ಹಿನ್ನೆಲೆಯಲ್ಲಿ ಏರ್ ಬ್ಯಾಗ್ ಓಪನ್ ಆಗದ ಕಾರಣ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

ನಿರ್ಲಕ್ಷ್ಯದ ಚಾಲನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂಚಾರಿ ನಿಯಮ ಸಂಪೂರ್ಣವಾಗಿ ಮೇಲ್ನೋಟಕ್ಕೆ ಉಲ್ಲಂಘನೆ ಆಗಿದೆ ಎಂದು ಹೇಳಿದರು.

- Advertisement -