ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಭಾರತ ತಂಡ ಪ್ರಕಟ, ಕನ್ನಡಿಗನಿಗೆ ಸ್ಥಾನ

Prasthutha|

- Advertisement -

ಸೆಪ್ಟಂಬರ್‌ 10ರಿಂದ 18ರವರೆಗೆ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯಲಿರುವ ಸೀನಿಯರ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ಲಕ್ನೋ ಮತ್ತು ಹರಿಯಾಣದ  ಸೋನಿಪಥ್‌ನ ಸಾಯ್‌ ಕೇಂದ್ರಗಳಲ್ಲಿ ಸೋಮವಾರ ಮತ್ತು ಮಂಗಳವಾರ ನಡೆಸಲಾದ ಆಯ್ಕೆ ಟ್ರಯಲ್ಸ್‌ ಬಳಿಕ ತಂಡವನ್ನು ಅಂತಿಮಗೊಳಿಸಲಾಗಿದೆ.

ಆಗಸ್ಟ್‌ ಆರಂಭದಲ್ಲಿ ಬರ್ಮಿಂಗ್‌ಹ್ಯಾಮ್‌ನಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ʻಹ್ಯಾಟ್ರಿಕ್ʼ ಚಿನ್ನದ ಪದಕಗಳನ್ನು ಪೂರ್ಣಗೊಳಿಸಿದ್ದ ವಿನೇಶ್ ಫೋಗಟ್ ಮಹಿಳೆಯರ ತಂಡದ ಸಾರಥ್ಯವಹಿಸಲಿದ್ದಾರೆ. ಮತ್ತೊಂದೆಡೆ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.

- Advertisement -

ಬರ್ಮಿಂಗ್‌ಹ್ಯಾಮ್‌ನಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಬಜರಂಗ್ ಪೂನಿಯಾ(65 ಕೆಜಿ),  ರವಿ ದಹಿಯಾ (57 ಕೆಜಿ)  ಹಾಗೂ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ದೀಪಕ್ ಪುನಿಯಾಗೆ (86 ಕೆಜಿ) ಅರ್ಹತಾ ಸುತ್ತಿನ ಪಂದ್ಯಗಳಿಂದ ವಿನಾಯತಿ ನೀಡಲಾಗಿತ್ತು.

ಕನ್ನಡಿಗ ಅರ್ಜುನ್‌ ಆಯ್ಕೆ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರಿಕೊ ರೋಮನ್‌ ಸ್ಟೈಲ್‌ನ 55 ಕೆ.ಜಿ. ವಿಭಾಗದಲ್ಲಿ, ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿಯ ಅರ್ಜುನ್‌ ಹಲಕುರ್ಕಿ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.  ಅರ್ಹತಾ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಎದುರಾಳಿಗಳನ್ನು ಮಣಿಸುವ ಮೂಲಕ ಅರ್ಜುನ್‌, ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಭಾರತೀಯ ತಂಡ:

ಮಹಿಳಾ ವಿಭಾಗ:

ವಿನೇಶ್ ಫೋಗಟ್ (53 ಕೆಜಿ), ಸುಷ್ಮಾ ಶೋಕೆನ್ (55ಕೆಜಿ), ಸರಿತಾ ಮೋರ್(57ಕೆಜಿ) ಮಾನ್ಸಿ ಅಹ್ಲಾವತ್ (59 ಕೆಜಿ), ಸೋನಮ್ ಮಲಿಕ್ (62 ಕೆಜಿ), ಶೆಫಾಲಿ (65 ಕೆಜಿ), ನಿಶಾ ದಹಿಯಾ (68ಕೆಜಿ), ರೀತಿಕಾ (72 ಕೆಜಿ), ಪ್ರಿಯಾಂಕಾ (76 ಕೆಜಿ)

ಪುರುಷರ ವಿಭಾಗ

ಫ್ರೀಸ್ಟೈಲ್: ರವಿ ದಹಿಯಾ (57 ಕೆಜಿ), ಪಂಕಜ್ ಮಲಿಕ್ (61 ಕೆಜಿ), ಬಜರಂಗ್ ಪುನಿಯಾ (65 ಕೆಜಿ), ನವೀನ್ ಮಲಿಕ್ (70 ಕೆಜಿ), ಸಾಗರ್ ಜಗ್ಲಾನ್ (74 ಕೆಜಿ), ದೀಪಕ್ ಮಿರ್ಕಾ (79 ಕೆಜಿ), ದೀಪಕ್ ಪುನಿಯಾ (86 ಕೆಜಿ), ವಿಕ್ಕಿ ಹೂಡಾ (92 ಕೆಜಿ), ವಿಕ್ಕಿ ಚಾಹರ್ (97 ಕೆಜಿ), ದಿನೇಶ್ ಧನಕರ್ (125 ಕೆಜಿ)

ಗ್ರೀಕೊ-ರೋಮನ್: ಅರ್ಜುನ್ ಹಲಕುರ್ಕಿ (55 ಕೆಜಿ), ಜ್ಞಾನೇಂದರ್ (60 ಕೆಜಿ), ನೀರಜ್ (63 ಕೆಜಿ), ಆಶು (67 ಕೆಜಿ), ವಿಕಾಸ್ (72 ಕೆಜಿ), ಸಚಿನ್ (77 ಕೆಜಿ), ಹರ್ಪ್ರೀತ್ ಸಿಂಗ್ (82 ಕೆಜಿ), ಸುನಿಲ್ ಕುಮಾರ್ (87 ಕೆಜಿ), ದೀಪಾಂಶು (97 ಕೆಜಿ) ), ಸತೀಶ್ (130 ಕೆಜಿ).

Join Whatsapp