ಮುಂದಿನ 3 ದಿನಗಳಲ್ಲಿ 800 ಕೋಟಿಯ ಗಡಿ ದಾಟಲಿದೆ ಜನಸಂಖ್ಯೆ!

Prasthutha|

ವಾಷಿಂಗ್ಟನ್: ಮುಂದಿನ 3 ದಿನಗಳಲ್ಲಿ ವಿಶ್ವದ ಜನಸಂಖ್ಯೆಯು 800 ಕೋಟಿ ತಲುಪಲಿದೆ ಎಂದು ಎಂದು ವಿಶ್ವಸಂಸ್ಥೆ ತಿಳಿಸಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ ನವೆಂಬರ್ 15ರಂದು ವಿಶ್ವದ ಜನಸಂಖ್ಯೆಯು 800 ಕೋಟಿಯನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಮಾನವ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲು. ಈ ಅಭೂತಪೂರ್ವ ಬೆಳವಣಿಗೆಯು ಸಾರ್ವಜನಿಕ ಆರೋಗ್ಯ ಪೋಷಣೆ, ವೈಯಕ್ತಿಕ ನೈರ್ಮಲ್ಯ ಮತ್ತು ಔಷಧದ ಸುಧಾರಣೆಗಳ ಕಾರಣದಿಂದಾಗಿ ಆಗಿದೆ. ಮಾನವ ಜೀವಿತಾವಧಿಯಲ್ಲಿ ಕ್ರಮೇಣ ಹೆಚ್ಚಳವಾಗಿದೆ. ಇದು ಕೆಲವು ದೇಶಗಳಲ್ಲಿ ಹೆಚ್ಚಿನ ಮತ್ತು ನಿರಂತರ ಫಲವತ್ತತೆಯ ಫಲಿತಾಂಶವಾಗಿದೆ ಎಂದು ತಿಳಿಸಿದೆ.

2023ರಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಬದಲಾಗಲಿದೆ ಎಂದೂ ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸುತ್ತದೆ. 2050ರ ವೇಳೆಗೆ ಜನಸಂಖ್ಯೆಯ ಅರ್ಧದಷ್ಟು ಹೆಚ್ಚಳವು ಕೇವಲ ಎಂಟು ದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತದೆ. ಅವುಗಳೆಂದರೆ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ಟಾಂಝಾನಿಯಾ ಎಂದು ಗುರುತಿಸಲಾಗಿದೆ.

- Advertisement -

1974ರಲ್ಲಿ ವಿಶ್ವ 400 ಕೋಟಿ ಜನಸಂಖ್ಯೆ ಹೊಂದಿತ್ತು. ಇದೀಗ ವಿಶ್ವಸಂಸ್ಥೆಯ ವರದಿಯ ಪ್ರಕಾರ ಜಾಗತಿಕ ಜನಸಂಖ್ಯೆಯು ಕೇವಲ 48 ವರ್ಷಗಳಲ್ಲಿ ದುಪ್ಪಟ್ಟಾಗಿದ್ದು, 800 ಕೋಟಿ ತಲುಪಲಿದೆ.

ವಿಶ್ವದ ಜನಸಂಖ್ಯೆಯು 700 ರಿಂದ 800 ಕೋಟಿ ತಲುಪಲು 12 ವರ್ಷಗಳನ್ನು ತೆಗೆದುಕೊಂಡರೆ, 900 ಕೋಟಿ ತಲುಪಲು ಸುಮಾರು 15 ವರ್ಷಗಳನ್ನು ತೆಗೆದುಕೊಳ್ಳಲಿದೆ. 2037ರ ವೇಳೆಗೆ ಇದು ಜಾಗತಿಕ ಜನಸಂಖ್ಯೆಯ ಒಟ್ಟಾರೆ ಬೆಳವಣಿಗೆಯ ದರವು ನಿಧಾನವಾಗುವುದಕ್ಕೆ ಉದಾಹರಣೆಯಾಗಿದೆ.

ಈ ಮಧ್ಯೆ ವಿಶ್ವದ ಜನಸಂಖ್ಯೆಯು 2030ರಲ್ಲಿ ಸುಮಾರು 850 ಕೋಟಿ ತಲುಪಿದರೆ, 2050ರಲ್ಲಿ 970 ಕೋಟಿಗೆ ವೃದ್ಧಿಯಾಗಲಿದೆ ಮತ್ತು 2080ರ ವೇಳೆಗೆ ಸುಮಾರು 1004 ಕೋಟಿಗೆ ಏರಬಹುದು ಹಾಗೂ 2100 ರವರೆಗೆ ಅದೇ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

Join Whatsapp