ವಿಶ್ವಬ್ಯಾಂಕಿನಿದ 1917 ಕೋಟಿ ಸಾಲ ಪಡೆದುಕೊಂಡ ಭಾರತ : ಮರು ಪಾವತಿಗೆ 22 ವರ್ಷ ಗಡುವು

Prasthutha|

ನವದೆಹಲಿ: ವಿಶ್ವಬ್ಯಾಂಕಿನಿದ ಭಾರತ 1917 ಕೋಟಿ ಸಾಲ ಪಡೆದುಕೊಳ್ಳಲು ಉದ್ದೇಶಿಸಿದ್ದು 245 ಮಿಲಿಯನ್ ಡಾಲರ್ ಸಾಲವನ್ನು ವಿಶ್ವಬ್ಯಾಂಕ್ ಅನುಮೋದಿಸಿದೆ.

- Advertisement -

ಮಾರ್ಚ್ 2020ಕ್ಕೆ ಕೊನೆಗೊಳ್ಳುವ ರ್ಥಿಕ ರ್ಷದಲ್ಲಿ 1.2 ಶತಕೋಟಿ ಟನ್ ಸರಕುಗಳನ್ನು ಸಾಗಿಸುವ ಮೂಲಕ ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾಗಿ ಮಾರ್ಪಟ್ಟಿದೆ. ಆದರೆ ಭಾರತದ ಸರಕು ಸಾಗಣೆಯ ಮುಕ್ಕಾಲುಭಾಗ ರಸ್ತೆಯ ಮೂಲಕ ಸಾಗಿಸಲಾಗುತ್ತದೆ.

ಕೇವಲ ಶೇ 17ರಷ್ಟು ಮಾತ್ರ ರೈಲು ಮೂಲಕ ಸಾಗಣೆಯಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಮತ್ತು ರೈಲ್ವೇ ಮೂಲಕ ಸಾಗಾಟ ಹೆಚ್ಚಿಸುವ ಸಲುವಾಗಿ ಈ ಸಾಲವನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

- Advertisement -

ವಿಶ್ವಸಂಸ್ಥೆಯ ಅಂಗಸಂಸ್ಥೆ ಆದಂತಹ ಅಂತರರಾಷ್ಟ್ರೀಯ ಪುರ್ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ನಿಂದ (ಐಬಿರ್ಡಿ) ದೊರೆಯುವ 1917 ಕೋಟಿ ಸಾಲದ ಮರುಪಾವತಿಯ ಅವಧಿ 22 ರ್ಷಗಳಾಗಿವೆ.

Join Whatsapp