ವಕೀಲರ ಮೇಲೆ ಪೊಲೀಸ್ ದೌರ್ಜನ್ಯ: ಕಾರ್ಮಿಕರ ಪರಿಷತ್ ಖಂಡನೆ

Prasthutha|

ಬೆಂಗಳೂರು: ಪೊಲೀಸರಿಂದ ವಕೀಲರ ಮೇಲಾಗುತ್ತಿರುವ ದೌರ್ಜನ್ಯ ಮಿತಿಮೀರಿದೆ. ಶಿಕಾರಿಪುರದಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿದ್ದ ಪ್ರಕರಣ ಇನ್ನೂ ನೆನಪಿನಿಂದ ಮಾಸಿಲ್ಲ ಈಗ ಪುಂಜಾಲಕಟ್ಟೆ ಠಾಣೆ ಪೊಲೀಸರು ಥಳಿಸಿ ತಾಯಿ ಮತ್ತು ಸಹೋದರನ ಎದುರೇ ಬಟ್ಟೆ ಹರಿದು ಅಮಾನವೀಯವಾಗಿ ಜೀಪಿನಲ್ಲಿ ಎಳೆದೊಯ್ದಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗ ಹೇಳಿದೆ.

- Advertisement -

 ಗೃಹ ಸಚಿವರಿಗೆ ಇಲಾಖೆಯ ಮೇಲೆ ಹಿಡಿತವೇ ಇಲ್ಲ ಪೊಲೀಸರ ದುಂಡಾವರ್ತನೆ ಹೆಚ್ಚಾಗಿದೆ. ನ್ಯಾಯಾಲಯದ ಅಧಿಕಾರಿಗಳಾದ ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿನಿತ್ಯ ಹೋರಾಟ ನಡೆಸುವ ವಕೀಲರ ಮೇಲೆ ಪೊಲೀಸರ ದೌರ್ಜನ್ಯ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಅಣಕ. ವಕೀಲರಾದ ಕುಲದೀಪ್ ಶೆಟ್ಟಿ ಅವರನ್ನು ಥಳಿಸಿ ಅವಮಾನಿಸಿ ಬಂಧಿಸಿದ ಪುಂಜಾಲಕಟ್ಟೆ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷ ಜಾಬೀರ್ ಆತ್ತಾಸ್ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Join Whatsapp