ಹಿಮಾಚಲ ಪ್ರದೇಶ: ಪಕ್ಷ ವಿರೋಧಿ ಚಟುವಟಿಕೆ| 30 ನಾಯಕರನ್ನು ಉಚ್ಛಾಟನೆ ಮಾಡಿದ ಕಾಂಗ್ರೆಸ್

Prasthutha|

ಶಿಮ್ಲಾ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 30 ನಾಯಕರನ್ನು ಉಚ್ಛಾಟನೆ ಮಾಡಿದೆ.

- Advertisement -

ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸಮಿತಿ (ಎಚ್‌ಪಿಸಿಸಿ) ಅಧ್ಯಕ್ಷ ಅಮಿತ್ ಪಾಲ್‌ ಸಿಂಗ್ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೆ ಒಂದು ದಿನ ಬಾಕಿ ಇರುವಾಗಲೇ ಪಕ್ಷ ವಿರೋಧಿ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ 30 ಮಂದಿ ನಾಯಕರನ್ನು ಅಮಾನತು ಮಾಡಿದೆ.

- Advertisement -

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿ.8ರಂದು (ಗುರುವಾರ) ಪ್ರಕಟವಾಗಲಿದೆ.

Join Whatsapp