ರಾಜ್ಯದಲ್ಲಿ 5, 8ನೇ ತರಗತಿ ಮಕ್ಕಳನ್ನು ಅನುತ್ತೀರ್ಣ ಮಾಡುವುದಿಲ್ಲ: ಬಿ.ಸಿ.ನಾಗೇಶ್‌

Prasthutha|

ತುಮಕೂರು: ಇತ್ತೀಚೆಗೆ ರಾಜ್ಯ ಸರಕಾರವು ಐದು ಮತ್ತು ಎಂಟನೇ ತರಗತಿ ಮಕ್ಕಳ ಪರೀಕ್ಷೆ ಮೌಲ್ಯಮಾಪನ ಕುರಿತಂತೆ ಹೊರಡಿಸಿರುವ ಸುತ್ತೋಲೆಯು ಗೊಂದಲಕಾರಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಅದು ಪಬ್ಲಿಕ್‌ ಪರೀಕ್ಷೆಯಲ್ಲ, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ. ಆತನ ಕಲಿಕೆಯನ್ನು ಮೌಲ್ಯ ಮಾಪನ ಮಾಡುವುದಷ್ಟೇ ಕೆಲಸವನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮಗುವಿನ ತಿಳಿವಳಿಕೆಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಇದರಿಂದ ಮುಂದಿನ ತರಗತಿಯಲ್ಲಿ ಆತ ತನ್ನ ಪಕ್ಕದಲ್ಲಿ ಕುಳಿತವನಿಗಿಂತ ನಾನು ಕಲಿಕೆಯಲ್ಲಿ ಹಿಂದೆ ಎಂಬ ಕೀಳರಿಮೆ ಬಾರದಂತೆ ನೋಡಿಕೊಳ್ಳುವುದೇ ಇದರ ಉದ್ದೇಶ ಎಂದರು.



Join Whatsapp