ಒಪಿಎಸ್ ಜಾರಿ ಕುರಿತು ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ: ಸಿದ್ದರಾಮಯ್ಯ

Prasthutha|

ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿ ಕುರಿತಂತೆ ನಮ್ಮ ಪಕ್ಷದ ಹೈಕಮಾಂಡ್ ಜತೆ ಮಾತನಾಡಿ ನಿರ್ಧಾರ ತಿಳಿಸಲಾಗುವುದು. ಸುಳ್ಳು ಭರವಸೆ ನೀಡಲು ಹೋಗುವುದಿಲ್ಲ. ಸರ್ಕಾರಿ ನೌಕರರ ಹಕ್ಕು ರಕ್ಷಣೆ ಮಾಡುವುದು ನಮ್ಮ ಜವದ್ಬಾರಿಯಾಗಿದೆ. ಅದಷ್ಟು ಬೇಗ ನಿರ್ಧಾರ ತಿಳಿಸಲಾಗುವುದು .ನಿಮ್ಮ ಜತೆ ನಾನಿದ್ದೇನೆ . ನಿಮ್ಮ ಬೇಡಿಕೆಗೆ ವಿರುದ್ಧ ಇಲ್ಲ ಎಂದು ವಿಧಾನ ಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

- Advertisement -

ಎನ್ ಪಿ ಎಸ್ ನೌಕರರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೈಗೊಂಡಿರುವ ಧರಣಿ ಸ್ಥಳಕ್ಜೆ ಬೇಟಿ ನೀಡಿದ ಅವರು, ಚುನಾಯಿತ ಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು ಜನಪರ ಕೆಲಸ ಮಾಡಿದರೆ ಜನರ ಸಮಸ್ಯೆ ಬಗೆಹರಿಸಲು ಸಾಧ್ಯ. ಸರ್ಕಾರಿ ನೌಕರರಿಗೆ ನ್ಯಾಯಯುತ ಸಂಬಳ, ಪಿಂಚಣಿ ಕೊಡಬೇಕು. ಈ ಕುರಿತು ವಿಧಾನ ಸಭೆಯಲ್ಲಿ ಪ್ರಸ್ತಾಪಿದ್ದೇನೆ. ಒಪಿಎಸ್ ಮಾಡಲು ಸಾದ್ಯವಿಲ್ಲ ಎಂದು ನನ್ನ ಅಧಿಕಾರವಧಿಯಲ್ಲಿ ಹೇಳಿದ್ದೇ. ಈಗ ಕಾಲ ಬದಲಾಗಿದೆ. ನಮ್ಮ ಕೇಂದ್ರ ಮಟ್ಟದಲ್ಲಿ ಹಿಮಾಚಲ ಪ್ರದೇಶದಲ್ಲಿ ಒಪಿಎಸ್ ಜಾರಿ ತರಲಾಗಿದೆ.ಅದರಂತೆ ನಮ್ಮ ಸರ್ಕಾರ ಬಂದರೆ ಜಾರಿ ತರಲು ಪ್ರಯತ್ನಿಸಲಾಗುವುದು. ಈಗಾಗಲೇ ಜಾರ್ಖಂಡ್, ಅಸ್ಸಾಂ ನಲ್ಲಿ ಜಾರಿತರಲಾಗಿದೆ. ಕೇಂದ್ರದವರ ಜತೆ ಮುಕ್ತವಾಗಿ ಮಾತನಾಡಿ ಕಾಂಗ್ರೆಸ್ ನ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನಮ್ಮ ಪಕ್ಷದ ನಿಲುವನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದರು.

ಎನ್ ಪಿ ಎಸ್ ಜಾರಿ ಬಂದಿದ್ದು ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಹೋರಾಟ ತೀವ್ರತೆ ಇರಲ್ಲಿಲ್ಲ. ಆರನೇ ವೇತನ ಆಯೋಗ ರಚನೆ ಮಾಡಿ ಅದು ಕೊಟ್ಟತಹ ವರದಿ ಸ್ವೀಕಾರ ಮಾಡಿ ಜಾರಿ ತಂದಿದ್ದೇವೆ ಸರ್ಕಾರ ಕ್ಕೆ ಭಾರ ಆಗಿದ್ದರೂ ಅನುಷ್ಠಾನಕ್ಕೆ ತರಲಾಯಿತು ಎಂದು ಹೇಳಿದರು.

Join Whatsapp