ವಂಡರ್ ಲಾ ತ್ರೈಮಾಸಿಕ ಫಲಿತಾಂಶ ಪ್ರಕಟ: ಹಿಂದೆಂದಿಗಿಂತಲೂ ಹೆಚ್ಚು ಆದಾಯ ಗಳಿಸಿದ ವಂಡರ್ ಲಾ

Prasthutha|

ಬೆಂಗಳೂರು: ವಂಡರ್ಲಾ ಅಮ್ಯೂಸ್ ಮೆಂಟ್ ಪಾರ್ಕ್ ಜೂನ್ 30, 2022ರ ಹಣಕಾಸಿನ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಹಣಕಾಸು ವರ್ಷದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಪಡೆದುಕೊಂಡಿದೆ.

- Advertisement -

ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರತಿಯೊಂದರಲ್ಲೂ ಲಾಭದಾಯ ರಿಸಲ್ಟ್ ಪಡೆದುಕೊಂಡಿದೆ.

ಈ ತ್ರೈಮಾಸಿಕ ಅವಧಿಯಲ್ಲಿ ವಂಡರ್ ಲಾ ಒಟ್ಟು 11 ಲಕ್ಷಕ್ಕೂ ಹೆಚ್ಚು (1.1 ಮಿಲಿಯನ್) ಜನರು ಭೇಟಿ ನೀಡಿದ್ದು, 150 ಕೋಟಿ ರೂ. ಆದಾಯ ಗಳಿಸಿದೆ. ಕೋವಿಡ್ ಸಂದರ್ಭಕ್ಕೆ ಹೋಲಿಸಿದರೆ ಶೇ. 26% ಆದಾಯ ಬೆಳವಣಿಗೆ ಕಂಡಿದೆ. ಕಳೆದ ವರ್ಷ 5.43 ಕೋಟಿ ರೂ. ಮಾತ್ರ ಆದಾಯ ಗಳಿಸಲಾಗಿತ್ತು. ಅದರಲ್ಲೂ ಬೆಂಗಳೂರು ಪಾರ್ಕ್ ಒಂದರಲ್ಲಿಯೇ 4.23 ಲಕ್ಷ ಜನರು ಭೇಟಿ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7 ರಷ್ಟು ಹೆಚ್ಚಳವಾಗಿದೆ. ಇನ್ನು ಕೊಚ್ಚಿ ಹಾಗೂ ಹೈದರಾಬಾದ್ ಪಾರ್ಕ್ ನಲ್ಲಿಯೂ ಸಹ ಶೇ. 38 ಹಾಗೂ ಶೇ. 39ರಷ್ಟು ಭೇಟಿ ನೀಡುವವರ ಸಂಖ್ಯೆ ಏರಿಕೆಯಾಗಿದೆ. ಎಲ್ಲಾ ಪಾರ್ಕ್ ಗಳಲ್ಲಿಯೂ ಆದಾಯದ ಮೊತ್ತ ಡಬಲ್ ಡಿಜಿಟ್ ಬೆಳವಣಿಗೆ ಕಂಡಿದೆ. ಒಟ್ಟಾರೆ ಆದಾಯದಲ್ಲಿ ಶೇ. 26ರಷ್ಟು ಹೆಚ್ಚಾಗಿದೆ. ಕೇವಲ ಪಾರ್ಕ್ ಒಂದೇ ಅಲ್ಲದೇ, ವಂಡರ್ಲಾ ರೆಸಾರ್ಟ್ ಆದಾಯದಲ್ಲಿಯೂ ಹೆಚ್ಚಳ ಕಂಡು ಬಂದಿದ್ದು, ಶೇ. 28ರಷ್ಟು ಆದಾಯ ಬೆಳವಣಿಗೆ ಕಂಡಿದೆ.

- Advertisement -

ಈ ಕುರಿತು ಮಾತನಾಡಿದ ವಂಡರ್ ಲಾ ವ್ಯವಸ್ಥಾಪಕ ಅರುಣ್ ಕೆ. ಚಿಟ್ಟಿಲಪಿಲ್ಲಿ, ಈ ತ್ರೈಮಾಸಿಕ ಆದಾಯ ಅತ್ಯಂತ ಸಂತೃಪ್ತಿ ನೀಡಿದೆ. ಈ ಆದಾಯವೂ ಕೋವಿಡ್ ಪೂರ್ವದ ದಿನಗಳನ್ನು ನೆನಪಿಸುತ್ತಿವೆ. ಎಲ್ಲಾ ಮೂರು ಪಾರ್ಕ್ ಗಳಲ್ಲಿಯೂ ಜನರಿಗೆ ಮೆಚ್ಚುಗೆಯಾಗುವ ನೂತನ ಗೇಮ್ ಗಳನ್ನು ಆರಂಭಿಸಿದ್ದೇವೆ. ಹೀಗಾಗಿ ಜನ ತಮ್ಮ ಮನರಂಜನಾ ತಾಣವನ್ನಾಗಿ ವಂಡರ್ ಲಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೆ ಇನ್ನಷ್ಟು ಮೆಚ್ಚುಗೆಯಾಗುವ ಗೇಮ್ ಗಳನ್ನು ಪರಿಚಯಿಸುವ ಗುರಿ ಹೊಂದಿದೇವೆ ಎಂದು ಹೇಳಿದ್ದಾರೆ.

Join Whatsapp