ಬಾಗಲಕೋಟೆ: ಯೋಧನೊಬ್ಬನನ್ನು ತನ್ನ ಪತ್ನಿಯ ಸಹೋದರನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.
ಕರಿಸಿದ್ದಪ್ಪ ಕಳಸದ (25) ಕೊಲೆಯಾದ ಯೋಧನಾಗಿದ್ದು, ಸಿದ್ದನಗೌಡ ದೂಳಪ್ಪ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ ಊಟ ಮಾಡುವ ವೇಳೆ ಪತಿ ಮತ್ತು ಪತ್ನಿ ನಡುವೆ ಜಗಳ ನಡೆದಿತ್ತು. ಆ ಬಳಿಕ ಪತ್ನಿ ತನ್ನ ಸಹೋದರನಿಗೆ ಕರೆ ಮಾಡಿ ಮನೆಗೆ ಕರೆಸಿದ್ದರು. ಕೋಪದಲ್ಲಿ ಬಂದ ಸಿದ್ದನಗೌಡ ಚಾಕುವಿನಿಂದ ಯೋಧ ಕರಿಸಿದ್ದಪ್ಪನಿಗೆ ಇರಿದಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಯೋಧ ಮೃತಪಟ್ಟಿದ್ದಾನೆ.