ಮಹಿಳಾ ಟಿ20: ಸರಣಿ ಕೈವಶ ಮಾಡಿಕೊಂಡ ಆಸ್ಟ್ರೇಲಿಯಾ

Prasthutha|

ಮುಂಬೈ: ಟಿ20 ಸರಣಿಯ ನಿರ್ಣಾಯಕ ಹಾಗೂ 3ನೇ ಪಂದ್ಯದಲ್ಲಿ ಅಲಿಸ್ಸಾ ಹೀಲಿ ನೇತೃತ್ವದ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತ ವಿರುದ್ಧ 7 ವಿಕೆಟ್​ ಭರ್ಜರಿ ವಿಜಯ ತನ್ನದಾಗಿಸುವ ಮೂಲಕ ಟಿ20 ಸರಣಿ 2-1 ಅಂತರದಿಂದ ಆಸ್ಟ್ರೇಲಿಯಾ ತಂಡದ ಪಾಲಾಗಿದೆ.

- Advertisement -

ಡಿವೈ ಪಾಟೀಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಬೆತ್ ಮೂನಿ 52 ನಾಟೌಟ್ ಮತ್ತು ನಾಯಕಿ ಅಲಿಸ್ಸಾ ಹೀಲಿ 55 ಬಾರಿಸಿ ಆಸೀಸ್​ ತಂಡದ ಗೆಲುವಿಗೆ ಕಾರಣವಾದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 147 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇನ್ನೂ ಎಂಟು ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ಗೆ 149 ರನ್ ಬಾರಿಸಿ ಗೆಲುವು ಸಾಧಿಸಿತು.

- Advertisement -

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರಾದ ಬೆತ್​ ಮೂನಿ ಮತ್ತು ನಾಯಕಿ ಅಲಿಸಾ ಹೀಲಿ ಎಚ್ಚರಿಕೆಯಿಂದ ಆಡುತ್ತಾ ಅಬ್ಬರದ ಪ್ರದರ್ಶನ ನೀಡಲು ಆರಂಭಿಸಿದರು. ತಾಹಿಲಾ ಮೆಕ್​ಗ್ರಾಥ್​ 20 ರನ್, ಲಿಚ್​ಫೀಲ್ಡ್​ 17 ರನ್ ಬಾರಿಸಿದರು.

ಭಾರತದ ಬೌಲರ್​ಗಳ ವೈಫಲ್ಯದ ಕಾರಣ ಪ್ರವಾಸಿ ತಂಡಕ್ಕೆ ಗೆಲುವು ಸುಲಭವಾಯಿತು.

ಮೊದಲು ಬ್ಯಾಟ್​ ಮಾಡಿದ ಭಾರತ ಪರ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಆರಂಭಿಕರಾಗಿ ಕಣಕ್ಕಿಳಿದು 39 ರನ್ ಕಲೆಹಾಕಿದರು. ಪವರ್ ಪ್ಲೇ ಅಂತ್ಯಕ್ಕೆ 51 ರನ್​ಗೆ 1 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಆಸ್ಟ್ರೇಲಿಯಾವು ಬೌಲಿಂಗ್​ನಲ್ಲಿ ಜೆಮಿಮಾ ರೊಡ್ರಿಗಸ್ (2) ಮತ್ತು ಹರ್ಮನ್ ಪ್ರೀತ್ ಕೌರ್ (3) ವೈಫಲ್ಯ ಕಂಡರು. ರಿಚಾ ಘೋಷ್ (34) ಭಾರತ ಪರ ಉತ್ತಮ ಸ್ಕೋರರ್ ಎನಿಸಿಕೊಂಡರು.

ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ದ್ವಿತೀಯ ಟಿ20 ಪಂದ್ಯವನ್ನು ಆಸ್ಟ್ರೇಲಿಯಾ ತಂಡ 6 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು.ಆಸ್ಟ್ರೇಲಿಯಾ ತಂಡ ಈ ಪ್ರವಾಸದಲ್ಲಿ ಏಕ ದಿನ ಹಾಗೂ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. 

Join Whatsapp