2023 ರಿಂದ ಮಹಿಳೆಯರ ಐಪಿಎಲ್ ಪಂದ್ಯಾಟ ಪ್ರಾರಂಭ

Prasthutha|

ದೆಹಲಿ: 2023 ರ ಮಾರ್ಚ್ ನಿಂದ ಮಹಿಳೆಯರ ವಿಭಾಗದ ಐಪಿಎಲ್ ಪಂದ್ಯಾಟ ನಡೆಯಲಿಕ್ಕಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಮೂಲಕ ವ್ಯಾಪಕ ವೀಕ್ಷಣೆಯ ಐಪಿಎಲ್ ಪಂದ್ಯಾಟಕ್ಕೆ ಮಹಿಳಾ ಮಣಿಗಳು ದಾಪುಗಾಲಿಡಲಿದ್ದಾರೆ.

- Advertisement -

ಒಟ್ಟು 20 ಪಂದ್ಯಗಳು ಇರಲಿದ್ದು, ಪ್ರತೀ ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿವೆ. ಲೀಗ್‌ನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸುತ್ತದೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ ಎಂದು ಬಿಸಿಸಿಐ ತಿಳಿಸಿದೆ.

‘ಈ ಪಂದ್ಯಾಟದಲ್ಲಿ ಐದು ತಂಡಗಳು ಒಳಗೊಂಡಿರುತ್ತದೆ. ಪ್ರತೀ ತಂಡಗಳು ಆರು ವಿದೇಶಿ ಆಟಗಾರ್ತಿಯರನ್ನೊಳಗೊಂಡು, ಗರಿಷ್ಠ 18 ಮಂದಿಯನ್ನು ಹೊಂದಿರುತ್ತವೆ‘ ಎಂದು ಬಿಸಿಸಿಐ ತಿಳಿಸಿದೆ.

Join Whatsapp