ಮಹಿಳಾ ದಿನಾಚರಣೆ| ಮಾ.8ರಂದು ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ BMTC

Prasthutha|

ಬೆಂಗಳೂರು: ಅಂತರರಾಷ್ಟೀಯ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ 08-03-2023 ರಂದು ಮಹಿಳೆಯರಿಗೆ ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ ಉಚಿತ ಪ್ರಯಾಣ ಕಲ್ಪಸಿದೆ ಎಂದು BMTC ಟ್ವೀಟ್ ಮಾಡಿದೆ.

- Advertisement -

ಬೆಂಗಳೂರಲ್ಲಿ BMTC ಬಸ್‌ಗಳಲ್ಲಿ ದಿನಂಪ್ರತಿ ಸುಮಾರು 10 ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಹೀಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಲ್ಲಾ ಮಹಿಳೆಯರೂ ಉಚಿತ ಪ್ರಯಾಣದ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂದು BMTC ಅಧಿಕಾರಿಗಳು ಹೇಳಿದ್ದಾರೆ.

2022ರ ಜ.15 ರಂದು ಬಿಎಂಟಿಸಿ ತನ್ನ ಬೆಳ್ಳಿ ಹಬ್ಬ ಆಚರಿಸಿಕೊಂಡಿತ್ತು. ಅಂದು ಕೂಡಾ BMTC ಇದೇ ರೀತಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿತ್ತು.

Join Whatsapp