ಟ್ರಾಫಿಕ್ ಸಿಗ್ನಲ್‌ನಲ್ಲೇ ಬೈಕ್ ಸವಾರನಿಂದ 40 ಲಕ್ಷ ರೂ. ಎಗರಿಸಿದ ಖದೀಮರು!

Prasthutha|

ಹೊಸದಿಲ್ಲಿ: ಟ್ರಾಫಿಕ್ ಸಿಗ್ನಲ್‌ನಲ್ಲೇ ಬೈಕ್ ಸವಾರನ ಬ್ಯಾಗ್‌ನಿಂದ 40ಲಕ್ಷ ರೂ. ಕಳ್ಳತನ ಮಾಡಿದ ಘಟನೆ ದೆಹಲಿಯ ಕೆಂಪುಕೋಟೆ ಬಳಿ ನಡೆದಿದೆ.

- Advertisement -

ಈ ಕುರಿತ ವೀಡಿಯೋ ವ್ಯಾಪಕ ವೈರಲಾಗಿದ್ದು, ಈ ದೃಶ್ಯದ ಆಧಾರದ ಮೇಲೆ ಪೋಲಿಸರು ಕಳ್ಳರನ್ನು ಬಂಧಿಸಿದ್ದಾರೆ.

ಟ್ರಾಫಿಕ್‌ನಲ್ಲಿ ನಿಂತಿದ್ದ ಬೈಕ್ ಸವಾರರೊಬ್ಬರ ಬ್ಯಾಗ್‌ನಿಂದ ಮೂವರು ವ್ಯಕ್ತಿಗಳು ಹಣದ ಕಟ್ಟುಗಳನ್ನು ಕಳ್ಳತನ ಮಾಡಿದ್ದಾರೆ. ಹಣವನ್ನು ಕಳ್ಳತನ ಮಾಡಿದ್ದ ಮೂವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

- Advertisement -

ಬ್ಯಾಗ್‌ನಲ್ಲಿ ಹಣವನ್ನು ಇಟ್ಟುಕೊಂಡು ಬಂದಿದ್ದ ಬೈಕ್ ಸವಾರನನ್ನು ಮೂವರು ಹಿಂಬಾಲಿಸಿಕೊಂಡು ಬಂದು ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕ್ ನಿಲ್ಲಿಸಿದಾಗ ಬ್ಯಾಗ್‌ನಿಂದ ಕಳ್ಳತನ ಮಾಡಿ ಪರಾರಿಯಾಗುವ ದೃಶ್ಯವನ್ನು ವೀಡಿಯೋದಲ್ಲಿ ಕಾಣಬಹುದು.

Join Whatsapp