ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

Prasthutha|

 ಉಡುಪಿ: ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಉಡುಪಿ ಜಿಲ್ಲಾ ಸಮಿತಿಯು ದಿನಾಂಕ 13/2/2023 ರಂದು ಅಸ್ತಿತ್ವಕ್ಕೆ ಬಂದಿದ್ದು ಜಿಲ್ಲಾಧ್ಯಕ್ಷೆಯಾಗಿ ನಾಝಿಯಾ ಕನ್ನಂಗಾರ್ ,  ಉಪಾಧ್ಯಕ್ಷೆಯಾಗಿ  ನಸೀಮಾ ಕಾಪು, ಕಾರ್ಯದರ್ಶಿಯಾಗಿ ರಹೀಮಾ ಕಾಪು, ಜೊತೆ ಕಾರ್ಯದರ್ಶಿಯಾಗಿ  ಹಾಜರ, ಕೋಶಾಧಿಕಾರಿಯಾಗಿ  ಲುತ್ಫಿಯಾ ಹಾಗೂ ಜಿಲ್ಲಾ ಸಮಿತಿ ಸದಸ್ಯರುಗಳಾಗಿ  ನಿಹಾನ ಪರ್ವೀನ್, ಫರಾ,  ಝೊಹರಾ, ರೆಹ್ಮತುನ್ನೀಸಾ ರವರು ಆಯ್ಕೆಯಾಗಿರುತ್ತಾರೆ. 

 ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಪ್ರಸಕ್ತ ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಮಹಿಳೆಯರು ರಾಜಕೀಯ ಪ್ರವೇಶ ಮಾಡಬೇಕು ಹಾಗೂ ರಾಜಕೀಯ ರಂಗದಲ್ಲಿ ಮಹಿಳೆಯರನ್ನು  ಸಬಲೀಕರಣಗೊಳಿಸಬೇಕೆಂಬ ಯ ಸಂದೇಶವನ್ನು ನೀಡಿದರು.ವಿಮ್  ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರು ಜಿಲ್ಲಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
Join Whatsapp