ಸಂಜೀವ ಭಟ್’ಗೆ ನೀಡಿದ್ದ ಭದ್ರತೆ ಹಿಂಪಡೆದುದನ್ನು ಪ್ರಶ್ನಿಸಿದ್ದ ಅರ್ಜಿ ವಜಾ

Prasthutha|


ಅಹ್ಮದಾಬಾದ್: 2018ರಲ್ಲಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ನೀಡಿದ್ದ ಭದ್ರತೆ ಹಿಂಪಡೆದುದನ್ನು ಕಾರಣ ಏನು ಎಂದು ಅವರ ಪತ್ನಿ ಶ್ವೇತಾ ಸಂಜೀವ್ ಭಟ್ ಪ್ರಶ್ನಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದೆ.

- Advertisement -


ಭದ್ರತೆ ಒದಗಿಸುವುದು ಹಿಂಪಡೆದುಕೊಳ್ಳುವುದು ಆಯಾ ಕಾಲದ ಅಗತ್ಯವಾಗಿರುತ್ತದೆ. ಸಂಜೀವ್ ಭಟ್ ಐಪಿಎಸ್ ಅಧಿಕಾರಿ ಆಗಿದ್ದಂತೆಯೇ ಒಂದು ಪ್ರಕರಣದಲ್ಲಿ ಸಾಕ್ಷಿಯೂ ಆಗಿದ್ದರು ಎಂದು ಅರ್ಜಿ ವಜಾ ಮಾಡಿದ ಏಕ ಪೀಠದ ಜಸ್ಟಿಸ್ ನಿರ್ಜರ್ ಎಸ್. ದೇಸಾಯಿ ಹೇಳಿದರು.


ಅರ್ಜಿಯಲ್ಲಿ ಶ್ವೇತಾ ಸಂಜೀವ್ ಭಟ್ ಮತ್ತು ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದೂ ಕೇಳಲಾಗಿತ್ತು. ಭದ್ರತೆ ಹಿಂಪಡೆದ ಬಗೆಗಿನ ದಾಖಲೆ ಒದಗಿಸುವ ಬಗ್ಗೆ ಪ್ರಸ್ತಾಪಿಸಿದ ಶ್ವೇತಾ ಅವರ ವಕೀಲರು ಕುಟುಂಬಕ್ಕೆ ಭದ್ರತೆ ನೀಡುವಂತೆ ಕೇಳುವ ಆತುರ ತೋರಲಿಲ್ಲ.
2018ರ ಸೆಪ್ಟೆಂಬರ್ ನಿಂದ ಸಂಜೀವ ಭಟ್ ಜೈಲಿನಲ್ಲಿರುವರು. ಅವರಿಗೆ ಪ್ರತ್ಯೇಕ ಭದ್ರತೆ ಒದಗಿಸುವ ವಿಷಯವಿದ್ದರೆ ಅದು ಈಗ ಸೂಕ್ತವಾದುದು ಎನಿಸುವುದಿಲ್ಲ ಎಂದೂ ಜಡ್ಜ್ ಹೇಳಿದರು.

- Advertisement -


“ಇನ್ನು ಪೊಲೀಸ್ ಭದ್ರತೆ ಎನ್ನುವುದು ಒಂದು ಹಕ್ಕು ಅಲ್ಲ. ಪೊಲೀಸರು ಸಂಖ್ಯೆ ಮತ್ತು ಇತರ ವ್ಯವಸ್ಥೆಯಲ್ಲಿ ಒಂದು ಮಿತಿಯಲ್ಲಿ ಇದ್ದಾರೆ. ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸುತ್ತಾರೆ. ಭದ್ರತೆ ಒದಗಿಸುವ ಹಕ್ಕು ಹೊಂದಿರುವ ರಾಜ್ಯ ಸರಕಾರಗಳು ಅದನ್ನು ಹಿಂದಕ್ಕೆ ಪಡೆಯುವ ಅಧಿಕಾರವನ್ನೂ ಹೊಂದಿವೆ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಎಲ್ಲರಿಗೂ ಬರೇ ಭದ್ರತೆ ನೀಡುವುದಕ್ಕಲ್ಲ” ಎಂದೂ ಹೈಕೋರ್ಟ್ ಪೀಠವು ಹೇಳಿತು.

Join Whatsapp