ಅಲ್-ಖೋಬರ್ : ಸ್ವಾತಂತ್ರ್ಯೋತ್ಸವ ಪ್ರಯುಕ್ತ ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮ

Prasthutha|

ಅಲ್-ಖೋಬರ್: 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸ್ಟೂಡೆಂಟ್ ಫ್ರೆಟರ್ನಿಟಿ ಫೋರಂ ಹಾಗೂ ವುಮೆನ್ಸ್ ಇಂಡಿಯಾ ಫೋರಂ ಸಹಯೋಗದೊಂದಿಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ ಖೋಬರಿನ ಕ್ಲಾಸಿಕ್ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಮ್ವರ್ ಷರೀಫ್ ಹಾಗೂ ಆಸಾದ್ ರ ಕಿರಾಅತ್ ಪಠಣದೊಂದಿಗೆ ಚಾಲನೆ ದೊರೆಯಿತು. ಶೆಝ ಫಾತಿಮಾ ಆರಿಫ್ ಮತ್ತು ತಂಡ ಆಕರ್ಷಕ ಸ್ವಾಗತ ಗೀತೆಯೊಂದಿಗೆ ಪ್ರೇಕ್ಷಕರಿಗೆ ಸ್ವಾಗತ ಕೋರಿದರು. ಮಾಸ್ಟರ್ ರೆಹಾನ್ ಕಾರ್ಯಕ್ರಮ ನಿರೂಪಿಸಿದರು.


“ಸಭೀ ಕಾ ಖೂನ್ ಹೇ ಶಾಮಿಲ್, ಯಹಾಂಕಿ ಮಿಟ್ಟೀಮೆ! ಕಿಸೀ ಕೇ ಬಾಪ್ ಕಾ ಹಿಂದೂಸ್ತಾನ್ ಥೋಡಿ ಹೇ?” – ಈ ಮಣ್ಣಿನಲ್ಲಿ ಎಲ್ಲರ ರಕ್ತವೂ ಮಿಳಿತಗೊಂಡಿದೆ, ಹಿಂದೂಸ್ತಾನ ಯಾರಪ್ಪನ ಸೊತ್ತೂ ಅಲ್ಲ ಎಂಬರ್ಥದ ಉರ್ದು ಕವಿ ರಾಹತ್ ಇಂಧೋರಿರವರ ಕವನದೊಂದಿಗೆ ಮುಕ್ತಾಯಗೊಂಡ ಶಾಜ್ನೀನ್ ಝೀನತ್ ರ ಭಾಷಣ ಶೋತೃಗಳ ಮೆಚ್ಚುಗೆಗೆ ಪಾತ್ರವಾಯಿತು.
ಬ್ರಿಟಿಷರ ನುಸುಳುವಿಕೆ ಮತ್ತು ಪೂರ್ವಜರ ತ್ಯಾಗ ಬಲಿದಾನವನ್ನು ಪ್ರಹಸನದ ಮೂಲಕ ತೋರಿಸಿಕೊಟ್ಟ ಆಯಾನ್ ಮತ್ತು ಫರ್ಮಾನ್ ತಂಡ ಎಲ್ಲರ ಗಮನ ಸೆಳೆಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ನೀಡಲಾಯಿತು.

- Advertisement -