ಇಂಡಿಯನ್ ಸೋಶಿಯಲ್ ಫೋರಂನಿಂದ ಕ್ರಿಕೆಟ್ ಪಂದ್ಯಾಟ

Prasthutha|

ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ, ದಮ್ಮಾಮ್ ಘಟಕದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಸಭಾ ಕಾರ್ಯಕ್ರಮ ಮತ್ತು ಕ್ರಿಕೆಟ್ ಪಂದ್ಯಾಟ ನಡೆಯಿತು. ತ್ರಿವರ್ಣ ಬಲೂನ್ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

- Advertisement -

ಖೋಬರ್ ರಾಕ ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಇಸ್ಕಾನ್ ಬುಲ್ಸ್ ದಮ್ಮಾಮ್ ತಂಡ, ದ್ವಿತೀಯ ಸ್ಥಾನವನ್ನು ರೂಫ್ ಟೆಕ್ ಜೂಬೈಲ್ ತಂಡ ಪಡೆಯಿತು. ನೌಶಾದ್ ಬೋಳಾರ್ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಸುರತ್ಕಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಖೋಬರ್ ಇಂಡಿಯನ್ ಸೋಶಿಯಲ್ ಫೋರಮಿನ ಅಧ್ಯಕ್ಷ ಸುನೈಫ್ ಮೆಲ್ಕಾರ್, ದಮ್ಮಾಮ್ ಅಧ್ಯಕ್ಷ ಸಲಾಹುದ್ದೀನ್ ಮೈಸೂರು ಭಾಗವಹಿಸಿದ್ದರು.


ಇಂಡಿಯನ್ ಫೆಟರ್ನಿಟಿ ಫೋರಮ್ ದಮ್ಮಾಮ್ನ ಪ್ರಧಾನ ಕಾರ್ಯದರ್ಶಿ ನಿಶಾಫ್ ಮೆಲ್ಕಾರ್, ಇಂಡಿಯನ್ ಸೋಶಿಯಲ್ ಫೋರಮ್ ಮಂಗಳೂರು ಕೋಸ್ಟಲ್ ಅಧ್ಯಕ್ಷ ಶಮೀರ್ ಮಂಚಿ, ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಸಿ ಡಬ್ಲ್ಯೂಡಿ ಅಧ್ಯಕ್ಷ ಹನೀಫ್ ದೇರಳಕಟ್ಟೆ, ಅಲ್ ಬರಾಕ್ ಶಿಪ್ಪಿಂಗ್ ದಮ್ಮಾಮ್ ಪ್ರಧಾನ ಲೆಕ್ಕ ಪರಿಶೋಧಕ ಹಾರೂನ್ ಮೊಯಿನ್ ಅಲ್ ದೀನ್ ಖೂತ್, ಇಂಡಿಯನ್ ಫೆಟರ್ನಿಟಿ ಫೋರಮ್ ದಮ್ಮಾಮ್ ಪ್ರಾಂತ್ಯದ ಅಧ್ಯಕ್ಷ ಶಬೀರ್ ಅಂಗರಗುಂಡಿ, ಅಲ್ ನೇಮರ್ ಟ್ರೇಡಿಂಗ್ ದಮ್ಮಾಮ್ ಮಾಲೀಕರಾದ ನದೀಮ್ ಮತ್ತಿತರರು ಭಾಗವಹಿಸಿದ್ದರು. ಮನ್ಸೂರ್ ಮಂಜೇಶ್ವರ, ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ಅಶ್ರಫ್ ಸುರತ್ಕಲ್ ವಂದಿಸಿದರು.

- Advertisement -