ಕೊಪ್ಪಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಕೊಪ್ಪಳ ಕಾಂಗ್ರೆಸ್ ಮಹಿಳಾ ಘಟಕದಿಂದ ಕಟೀಲ್ ಬಾಯಿ ತೊಳೆದುಕೊಳ್ಳಲು ಸ್ಪೀಡ್ ಪೋಸ್ಟ್ ಮೂಲಕ ಫಿನಾಯಿಲ್ ರವಾನೆ ಮಾಡಲಾಗಿದೆ.
ನಳಿನ್ ಕುಮಾರ್ ನಿಮ್ಮ ಹೊಲಸು ಬಾಯಿ ತೊಳೆದುಕೊಳ್ಳಿ ಎಂದು ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಘಟಕದವರು ವಿನೂತನ ಪ್ರತಿಭಟನೆ ಮಾಡಿದ್ದಾರೆ.
‘ರಾಹುಲ್ ಗಾಂಧಿ ಡ್ರಗ್ಸ್ ಅಡಿಕ್ಟ್, ಪೆಡ್ಲರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ಕಳೆದ ಎರಡು ಮೂರು ದಿನಗಳಿಂದ ಖಂಡನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದವರು ಇಂದು ಫಿನಾಯಿಲ್ ರವಾನ್ ಮಾಡಿದ್ದಾರೆ.