ಐಪಿಎಲ್’ನಲ್ಲಿ ಹೊಸ ತಂಡ ಖರೀದಿಸಲು ಮುಂದಾದ ಬಾಲಿವುಡ್ ತಾರಾ ದಂಪತಿ!

Prasthutha|

ಎರಡು ತಂಡಗಳಿಗೆ 15 ಕಂಪನಿಗಳಿಂದ ಬಿಡ್!?

- Advertisement -

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್-2022ರಲ್ಲಿ ಹೊಸ ಎರಡು ತಂಡಗಳು ಸೇರ್ಪಡೆಯಾಗಲಿದ್ದು, ತಂಡಗಳನ್ನು ಖರೀದಿಸಲು ತುದಿಗಾಲಲ್ಲಿ ನಿಂತಿರುವವರ ಪಟ್ಟಿಗೆ ಇದೀಗ ಬಾಲಿವುಡ್’ನ ತಾರಾ ದಂಪತಿ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಕೂಡ ಸೇರಿದ್ದಾರೆ ಎಂದು ಔಟ್’ಲುಕ್ ವರದಿ ಮಾಡಿದೆ. ಐಪಿಎಲ್’ನಲ್ಲಿ ಈಗಾಗಲೇ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಕೆಕೆಆರ್ ಹಾಗೂ ಪ್ರೀತಿ ಜಿಂಟಾ ಪಂಜಾಬ್ ತಂಡದ ಮಾಲೀಕರಾಗಿದ್ದಾರೆ.

ಐಪಿಎಲ್ ಆಡಳಿತ ಮಂಡಳಿಯು ಆಹ್ವಾನಿಸಿದ್ದ ಐಟಿಟಿ [ ಇನ್ವಿಟೇಶನ್ ಟು ಟೆಂಡರ್] ಪ್ರಕ್ರಿಯೆಯ ಗಡುವು ಮುಗಿದಿದ್ದು, ಅರ್ಹತೆಯ ಮಾನದಂಡಗಳನ್ನು ಪಾಲಿಸುವ 15 ಕ್ಕೂ ಹೆಚ್ಚು ಕಂಪನಿಗಳು ಅಕ್ಟೋಬರ್ 25ರಂದು ದುಬೈನಲ್ಲಿ ನಡೆಯುವ ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

- Advertisement -

ಹೊಸ ಐಪಿಎಲ್‌ ಫ್ರಾಂಚೈಸಿಗಳ ರೇಸ್‌ನಲ್ಲಿ ಗುಜರಾತ್‌ನ ಅಹಮದಾಬಾದ್‌ ಮತ್ತು ಉತ್ತರ ಪ್ರದೇಶದ ಲಖನೌ ನಗರಗಳು ಮುಂಚೂಣಿಯಲ್ಲಿದೆ. ಅಹಮದಾಬಾದ್‌ ಫ್ರಾಂಚೈಸಿಯನ್ನು ಖರೀದಿಸಲು ಅದಾನಿ ಗ್ರೂಪ್ ಉತ್ಸುಕವಾಗಿದೆ.
ಈ ನಡುವೆ ಬ್ರಿಟನ್‌ ಮೂಲದ ಜನಪ್ರಿಯ ಇಪಿಎಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್‌ ಸಹ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್ ಟೊರೆಂಟ್, ಸಿಂಗಾಪುರ ಮೂಲದ ಪಿಇ ಸಂಸ್ಥೆ, ನವೀನ್ ಜಿಂದಾಲ್ – ಜಿಂದಾಲ್ ಪವರ್ & ಸ್ಟೀಲ್ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.



Join Whatsapp