ಹನುಮಾನ್ ವಿಗ್ರಹದ ಮುಂದೆ ಮಹಿಳಾ ಬಾಡಿ ಬಿಲ್ಡರ್’ಗಳ ಬಿಕಿನಿ ಪೋಸ್: ಬಿಜೆಪಿ ವಿರುದ್ಧ ಆಕ್ರೋಶ

Prasthutha|

ಭೋಪಾಲ್: ಹನುಮಾನ್ ವಿಗ್ರಹದ ಮುಂದೆ ಬಿಕಿನಿ ತೊಟ್ಟು ಮಹಿಳೆಯರು ದೇಹದಾರ್ಢ್ಯ ಪ್ರದರ್ಶನ ಮಾಡಿದ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

- Advertisement -

ಈ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿತ್ತು ಎನ್ನಲಾಗಿದೆ.

13ನೇ ಮಿಸ್ಟರ್ ಜ್ಯೂನಿಯರ್ ಬಾಡಿಬಿಲ್ಡಿಂಗ್ ಸ್ಪರ್ಧೆ ಮಾರ್ಚ್ 4 ಹಾಗೂ 5ರಂದು ನಡೆದಿತ್ತು. ಇದರಲ್ಲಿ ಮಹಿಳಾ ಬಾಡಿಬಿಲ್ಡರ್ ಗಳು ಹನುಮಾನ್ ವಿಗ್ರಹದ ಮುಂದೆ ಪ್ರದರ್ಶನ ನೀಡಿದರು.  ಬಿಜೆಪಿ “ಅಶ್ಲೀಲತೆಯನ್ನು ಹರಡುತ್ತಿದೆ” ಮತ್ತು “ಭಾರತೀಯ ಸಂಸ್ಕೃತಿಯನ್ನು ಗೇಲಿ ಮಾಡುತ್ತಿದೆ” ಎಂದು ಆರೋಪಿಸಿದ ಕಾಂಗ್ರೆಸ್, ಸ್ಪರ್ಧೆ ನಡೆದ ಸ್ಥಳದಲ್ಲಿ ‘ಗಂಗಾ ಜಲ’ ಸಿಂಪಡಿಸಿ. ಪಕ್ಷದ ಕಾರ್ಯಕರ್ತರು ಸ್ಥಳದ “ಶುದ್ಧೀಕರಣ”ದ ಭಾಗವಾಗಿ ‘ಹನುಮಾನ್ ಚಾಲೀಸಾ’ ಪಠಿಸಿದ್ದಾರೆ.

Join Whatsapp