ಕಾಂಗ್ರೆಸ್’ನಿಂದ ಎರಡು ಗಂಟೆ ಬಂದ್: ಇದ್ಯಾವ ಸೀಮೆ ಬಂದ್ ಎಂದ ಸಿಎಂ ಬೊಮ್ಮಾಯಿ

Prasthutha|

ಮೈಸೂರು : ಕಾಂಗ್ರೆಸ್ ಮಾರ್ಚ್ 9 ರಂದು ಕರೆ ನೀಡಿರುವ ಬಂದ್, ಯಾವ ಸೀಮೆಯ ಬಂದ್. ಎಲ್ಲಾದರೂ ಎರಡು ಗಂಟೆ ಬಂದ್ ಮಾಡುವುದನ್ನು ಜಗತ್ತಿನಲ್ಲಿ ಕೇಳಿದ್ದೀರಾ ಎಂದು ಸಿ ಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

- Advertisement -


ಈ ಬಗ್ಗೆ ಮಾಧ್ಯಮಗಳ ಜೊತೆ ಅವರು, ಎರಡು ಗಂಟೆ ಬಂದ್ ಅದ್ಯಾವ ಸೀಮೆಯ ಬಂದ್, ಎರಡು ಗಂಟೆ ಬಂದ್ ಮಾಡುವುದನ್ನು ಎಲ್ಲಾದರೂ ಕೇಳಿದ್ದೀರಾ. ಈ ಬಂದ್ ಅನ್ನು ಕಾಂಗ್ರೆಸ್ ಏಕೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದವರ ಕೈ ಭ್ರಷ್ಟಾಚಾರದಿಂದ ಕೆಸರಾಗಿದೆ. ಅವರಿಗೆ ನಮ್ಮ ವಿರುದ್ಧ ಬಂದ್ ಮಾಡುವ ನೈತಿಕತೆ ಇದೆಯೇ ಎಂದು ಟೀಕಿಸಿದರು.


ಮಾರ್ಚ್ 9 ರಂದು ಪಿಯುಸಿ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳು ಇವೆ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಸುಪ್ರೀಂಕೋರ್ಟ್ ಕೂಡ ಬಂದ್ ಮಾಡಬಾರದು ಎಂದು ಹೇಳಿದೆ ಎಂದರು.

Join Whatsapp