ನೆಲ್ಲೂರ್: ತಮಿಳುನಾಡಿನ ನೆಲ್ಲೂರ್ ಎಂಬಲ್ಲಿ ಮಹಿಳೆಯೊಬ್ಬಳ ಮೃತದೇಹವು ಚರಂಡಿಯಲ್ಲಿದ್ದ ಸೂಟ್’ಕೇಸ್’ನಲ್ಲಿ ಪತ್ತೆಯಾಗಿದೆ.
ನೆಲ್ಲೂರ್ ಜಿಲ್ಲೆಯ ತಿರುಪ್ಪುರ್-ಧರ್ಮಾಪುರಂ ಹೆದ್ದಾರಿಯ ಅಂಚಿನಲ್ಲಿರುವ ಚರಂಡಿಯಲ್ಲಿ ರಕ್ತದ ಕಲೆಯಿದ್ದ ನೀಲಿ ಬಣ್ಣದ ಸೂಟ್’ಕೇಸ್ ಒಂದನ್ನು ಗಮನಿಸಿದ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ತಿರುಪ್ಪೂರು ಪೊಲೀಸರು ಸೂಟ್’ಕೇಸ್ ತೆರೆದಾಗ ಮಹಿಳೆಯೊಬ್ಬಳ ಮೃತದೇಹ ಕಂಡು ದಂಗಾಗಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ತಿರುಪ್ಪೂರು ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
“ಅಂದಾಜು 25 ರಿಂದ 30 ವರ್ಷದ ಮಹಿಳೆಯೊಬ್ಬರ ಮೃತದೇಹವು ನೈಟಿ ಧರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯ ಬಲ ಕೈಯಲ್ಲಿ ಟ್ಯಾಟು ಇದೆ. ದೇಹದ ಹೊರಭಾಗದಲ್ಲಿ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಅದಾಗಿಯೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಗುರುತು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಚರಂಡಿಯಲ್ಲಿದ್ದ ಸೂಟ್’ಕೇಸ್’ನಲ್ಲಿ ಮಹಿಳೆಯ ಮೃತದೇಹ ಪತ್ತೆ !
Prasthutha|