ಮುಂಬೈನಲ್ಲಿ ಮಹಿಳೆಯ ಮೇಲೆ ಅಮಾನುಷ ಅತ್ಯಾಚಾರ

Prasthutha|

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ವಾಣಿಜ್ಯ ನಗರಿ ಮುಂಬೈಯ ಸಾಕಿ ನಾಕಾದ ಖೈರಾನಿ ಎಂಬಲ್ಲಿ ಮಹಿಳೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸೆಯಲಾಗಿದೆ.

- Advertisement -

ಅತ್ಯಾಚಾರದ ನಂತರ ಸಂತ್ರಸ್ತೆಯ ಖಾಸಗಿ ಭಾಗಗಳಿಗೆ ಕಬ್ಬಿಣದ ರಾಡ್ ಗಳನ್ನು ತಳ್ಳಗಾಗಿದೆ.

ಘಟನೆಗೆ ಸಂಬಂಧಿಸಿದಂತೆ 45 ವರ್ಷದ ದುಷ್ಕರ್ಮಿಯೊಬ್ಬನನ್ನು, ಸಾಕಿ ನಾಕಾದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 307, 376, 323, 504ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಮಹಿಳೆಯ ಮೇಲೆ ನಡೆದ ಈ ಅಮಾನುಷ ಘಟನೆಯಿಂದಾಗಿ ತೀವ್ರ ರೀತಿಯಲ್ಲಿ ಗಾಯಗೊಂಡ ಸಂತ್ರಸ್ತೆಯನ್ನು ಸ್ಥಳೀಯರು ರಾಜವಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಸಕ್ತ ಆಕೆಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.



Join Whatsapp