ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸಹಿತ ಗಡಿ ಜಿಲ್ಲೆಗಳಲ್ಲಿ ವಾರಂತ್ಯ ಕರ್ಫ್ಯೂ ರದ್ದುಗೊಂಡ ಹಿನ್ನೆಲೆ ಪ್ರವಾಸಿ ತಾಣಗಳ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ನಗರದ ವಾಮಂಜೂರು ಸಮೀಪವಿರುವ ಪಿಲಿಕುಳ ನಿಸರ್ಗಧಾಮವೂ ವಾರಾಂತ್ಯ (ಶನಿವಾರ ಮತ್ತು ಭಾನುವಾರ)ದಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುವುದಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ಹೀಗಾಗಿ, ಪಿಲಿಕುಳ ಜೈವಿಕ ಉದ್ಯಾನವನದಲ್ಲಿರುವ ಎಲ್ಲಾ ಆಕರ್ಷಣೆಗಳು ವಾರಾಂತ್ಯದಲ್ಲಿ ತೆರೆದಿರುತ್ತದೆ ಎಂದು ಪ್ರಾಧಿಕಾರವು ತಿಳಿಸಿದೆ. ಆದರೆ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಹಾಗೂ ದೈಹಿಕ ಅಂತರದ ಜೊತೆಗೆ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಿದೆ.