ಸುರತ್ಕಲ್ | ಮಹಿಳೆಯ ಹತ್ಯೆಗೈದು ತಾನೂ ಆತ್ಮಹತ್ಯೆಗೈದ ಹೂವಿನ ವ್ಯಾಪಾರಿ

Prasthutha|

ಸುರತ್ಕಲ್ : ವಿವಾಹಿತ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದನೆನ್ನಲಾದ ಹೂವಿನ ವ್ಯಾಪಾರಿಯೊಬ್ಬ, ಆಕೆಯನ್ನು ಹತ್ಯೆ ಮಾಡಿದುದಲ್ಲದೆ, ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಕುಳಾಯಿ ನಿವಾಸಿ ವಸಂತ್(44) ಏಳೆಂಟು ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದ. ಈತನ ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ಸೂರಿಂಜೆಯ ವಿವಾಹಿತ ಮಹಿಳೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ.

- Advertisement -

ಈ ನಡುವೆ ಇಬ್ಬರ ಮಧ್ಯೆ, ಯಾವುದೋ ಕಾರಣಕ್ಕೆ ವೈಮನಸ್ಸು ಸೃಷ್ಟಿಯಾಗಿದ್ದು, ಬುಧವಾರ ಮಹಿಳೆಯನ್ನು ಹತ್ಯೆಗೈದು ವಸಂತ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಘಟನೆಗೆ ಸ್ಪಷ್ಟ ಕಾರಣವೇನೆಂದು ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ.

ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ, ಸುರತ್ಕಲ್ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿಕೊಡಲಾಗಿದೆ.

- Advertisement -