ಭ್ರಷ್ಟಾಚಾರದ ಆರೋಪ | ಮುಸ್ಲಿಂ ಲೀಗ್ ಶಾಸಕ, ಮಾಜಿ ಸಚಿವ ಇಬ್ರಾಹೀಂ ಕುಂಜು ಬಂಧನ

Prasthutha: November 18, 2020

ತಿರುವನಂತಪುರಂ : ಪಲರಿವೊಟ್ಟೊಮ್ ಫ್ಲೈ ಓವರ್ ಹಗರಣ ಪ್ರಕರಣದಲ್ಲಿ ಮುಸ್ಲಿಂ ಲೀಗ್ ನಾಯಕ, ಮಾಜಿ ಪಿಡಬ್ಲ್ಯೂಡಿ ಸಚಿವ ವಿ.ಕೆ. ಇಬ್ರಾಹೀಂ ಕುಂಜು ಅವರನ್ನು ಇಂದು ಬಂಧಿಸಲಾಗಿದೆ. ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಅವರನ್ನು ಬಂಧಿಸಿರುವುದಾಗಿ ಭ್ರಷ್ಟಾಚಾರ ತಡೆ ದಳದ ಸಿಬ್ಬಂದಿ ವರದಿ ಮಾಡಿಕೊಂಡಿದ್ದಾರೆ.

ಭ್ರಷ್ಟಾಚಾರ ತಡೆ ದಳದ ಸಿಬ್ಬಂದಿಯ ಎರಡು ತಂಡಗಳು ಮೊದಲು ಇಬ್ರಾಹೀಂ ಅವರ ನಿವಾಸಕ್ಕೆ ಸರ್ಚ್ ವಾರಂಟ್ ಜೊತೆ ಬಂದಿದ್ದವು. ಆದರೆ, ಅಲ್ಲಿ ಅವರು ಲಭಿಸದ ಕಾರಣ, ಆಸ್ಪತ್ರೆಯಲ್ಲಿ ದಾಖಲಾಗಿರುವ ಸುದ್ದಿ ತಿಳಿದು ಅಲ್ಲಿಗೆ ತೆರಳಿ, ಬಂಧಿಸಿರುವುದಾಗಿ ವರದಿ ದಾಖಲಿಸಿಕೊಂಡಿವೆ.

ಕುಂಜು ಅವರನ್ನು ವಶಕ್ಕೆ ಪಡೆಯುವುದೋ, ಅಥವಾ ಆಸ್ಪತ್ರೆಯಲ್ಲಿಯೇ ಉಳಿಸುವುದೋ ಎಂಬ ಬಗ್ಗೆ ಇಲಾಖೆಯು ಪರಿಶೀಲಿಸುತ್ತಿದೆ.

ಕಲಮಶ್ಶೇರಿ ಶಾಸಕರಾದ ಕುಂಜು, ಈ ಹಿಂದಿನ ಊಮ್ಮನ್ ಚಾಂಡಿ ಸರಕಾರದಲ್ಲಿ ಪಿಡಬ್ಲ್ಯೂಡಿ ಸಚಿವರಾಗಿದ್ದರು.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!