ಪತಿಯ ಜೊತೆ ಜಗಳ: ಐವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ !

Prasthutha: December 6, 2021

ರಾಜಸ್ಥಾನ: ಪತಿಯ ಜೊತೆ ಪ್ರತಿನಿತ್ಯ ಜಗಳವಾಡುತ್ತಿದ್ದ 7 ಮಕ್ಕಳ ತಾಯಿಯೊಬ್ಬರು, ತನ್ನ ಐವರು ಹೆಣ್ಣು ಮಕ್ಕಳೊಂದಿಗೆ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಬಂಜಾರೊನ್ ಕ ದೆರಾ ಎಂಬಲ್ಲಿಯ ಕಲಿಯಾಹೆದಿ ಗ್ರಾಮದಲ್ಲಿ ನಡೆದಿದೆ.

ಶಿವಲಾಲ್ ಬಂಜಾರ ಎಂಬವರ ಪತ್ನಿ ಬದ್ಮಾದೇವಿ (40), ತನ್ನ ಮಕ್ಕಳಾದ ಅರ್ಚನಾ (1), ಗುಂಜನ್ (4), ಕಾಜಲ್ (6),  ಅಂಕಲಿ (8), ಹಾಗೂ ಸಾವಿತ್ರಿ (14) ಜೊತೆ ಆತ್ಮಹತ್ಯೆಗೆ ಶರಣಾಗಿದ್ದು, ಉಳಿದ ಇಬ್ಬರು ಮಕ್ಕಳು, ಗಾಯತ್ರಿ (15) ಹಾಗೂ ಪೂನಮ್ (7) ಮನೆಯಲ್ಲಿ ಮಲಗಿದ್ದ ಕಾರಣ ಬದುಕುಳಿದಿದ್ದಾರೆ.

ಬದ್ಮಾದೇವಿ ಹಾಗೂ ಶಿವಲಾಲ್ ಬಂಜಾರ ನಡುವಿನ ಕೌಟುಂಬಿಕ ಕಲಹ ಶನಿವಾರ ರಾತ್ರಿ ತಾರಕಕ್ಕೇರಿತ್ತು. ಭಾನುವಾರ ತನ್ನ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಶಿವಲಾಲ್ ಬಂಜಾರ ಪಕ್ಕದ ಗ್ರಾಮಕ್ಕೆ ತೆರಳಿದ್ದರು. ಇದೇ ವೇಳೆ ಬದ್ಮಾದೇವಿ ತನ್ನ ಐವರು ಮಕ್ಕಳೊಂದಿಗೆ ಮನೆಯ ಸಮೀಪದ ಬಾವಿಗೆ ಹಾರಿದ್ದಾರೆ. ಸಂಜೆಯ ವೇಳೆಗೆ ಗ್ರಾಮಸ್ಥರು ಬಾವಿಯಲ್ಲಿ ಮೃತದೇಹಗಳು ತೇಲಾಡುತ್ತಿರುವುದ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಂಬಳಿ ಹಾಗೂ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಶಿವಲಾಲ್ ಬಂಜಾರ ಜೊತೆಗಿನ ದಿನನಿತ್ಯದ ಜಗಳವೇ ಆತ್ಮಹತ್ಯೆಗೆ ಕಾರಣ ಎಂದು ಚೆಹಾತ್ ಸರ್ಕಲ್ ಇನ್ಸ್’ಪೆಕ್ಟರ್ ಪ್ರವೀಣ್ ನಾಯಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. CRPC ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪ್ರವೀಣ್ ನಾಯಕ್ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!