ಝೂಮ್ ಸಭೆಯಲ್ಲಿ ಏಕಕಾಲದಲ್ಲಿ 900 ನೌಕರರಿಗೆ ಗೇಟ್’ಪಾಸ್ ನೀಡಿದ ವಿಶಾಲ್ ಗರ್ಗ್ !

Prasthutha|

ನ್ಯೂಯಾರ್ಕ್: ಕೋವಿಡ್-19 ಕಾರಣದಿಂದಾಗಿ ಕೆಲಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಜಗತ್ತಿನಾದ್ಯಂತ ಇನ್ನೂ ಮುಂದುವರಿದಿದೆ. ಇದೀಗ ಕಂಪನಿಯ CEO ಒಬ್ಬರು ಝೂಮ್ ಮೂಲಕ ಸಭೆ ನಡೆಸುತ್ತಿರುವಾಗಲೇ ಬರೋಬ್ಬರಿ 900 ಮಂದಿ ಸಿಬ್ಬಂದಿಯನ್ನು ಏಕಕಾಲದಲ್ಲಿ ಕೆಲಸದಿಂದ ವಜಾ ಗೊಳಿಸಿದ್ದಾರೆ. ಈ ZOOM MEETING ವೀಡಿಯೋ ಇದೀಗ ವೈರಲ್ ಆಗಿದೆ

- Advertisement -

ಅಮೆರಿಕದಲ್ಲಿ ಡಿಜಿಟಲ್​ ಸೇವೆ ನೀಡುವ​ ಕಂಪನಿಯಾದ ಬೆಟರ್​.ಕಾಮ್’​​ನ CEO ಭಾರತೀಯ ಮೂಲದ ವಿಶಾಲ್​ ಗರ್ಗ್​, ಝೂಮ್ ಸಭೆ ಆಯೋಜಿಸಿ ಅದರಲ್ಲಿ ತಮ್ಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿವಿಧ ದೇಶಗಳ 900 ಸಿಬ್ಬಂದಿಯನ್ನು ಏಕಕಾಲಕ್ಕೆ ವಜಾಮಾಡುವ ಘೋಷಣೆ ಮಾಡಿದ್ದಾರೆ. ಸಭೆಯಲ್ಲಿ ಮಾತನಾಡಿದ ವಿಶಾಲ್​ ಗರ್ಗ್, ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಹಾಗೂ ಉತ್ಪಾದಕತೆಯಲ್ಲಿನ ಹಿನ್ನಡೆಯಿಂದಾಗಿ ಈ ಝೂಮ್​ ಸಭೆಯಲ್ಲಿ ಭಾಗವಹಿಸಿರುವ ಎಲ್ಲಾ ನೌಕರರೂ ಕೆಲಸ ಕಳೆದುಕೊಳ್ಳುತ್ತಿರುವ ನತದೃಷ್ಟ ಗುಂಪಿಗೆ ಸೇರಿದ್ದಾರೆ ಎಂದು ಹೇಳಿದ್ದಾರೆ.

ಕೊರೊನಾ ಕಾರಣದಿಂದಾಗಿ ನಮ್ಮ ಸಂಸ್ಥೆಯ ಬೆಳವಣಿಗೆಯು ಕುಂಠಿತಗೊಂಡಿದೆ. ಹೀಗಾಗಿ ನಿಮ್ಮನ್ನು ಲೇ ಆಫ್​ ಮಾಡಲಾಗುತ್ತಿದೆ. ಈ ಕುರಿತು HR ವಿಭಾಗದಿಂದ ನಿಮ್ಮೆಲ್ಲರಿಗೂ ಈ-ಮೇಲ್​ ಸಂದೇಶ ಕಳುಹಿಸಲಾಗುವುದು. ಅದರಲ್ಲಿ ಭತ್ಯೆಗಳ ಕುರಿತಾದ ಮಾಹಿತಿ ಇರಲಿದೆ ಎಂದು ವಿಶಾಲ್​ ಗರ್ಗ್ ಹೇಳಿದ್ದಾರೆ.

- Advertisement -

ಬೆಟರ್​.ಕಾಮ್’​​ನ CEO ವಿಶಾಲ್​ ಗರ್ಗ್ ಮಾತುಗಳನ್ನು ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದು, ಈ ವೀಡಿಯೋ ಇದೀಗ ವೈರಲ್ ಆಗಿದೆ.    

Join Whatsapp