ಕೋವಿಡ್ ಲಸಿಕೆ ನೀಡಲು ಬಂದ ಆರೋಗ್ಯ ಸಿಬ್ಬಂದಿಗೆ ಹಾವು ತೋರಿಸಿ ಹೆದರಿಸಿದ ಮಹಿಳೆ !

Prasthutha|

ಜೈಪುರ್: ಕೋವಿಡ್ ಲಸಿಕೆ ನೀಡಲು ಹಳ್ಳಿಗೆ ಬಂದ ಆರೋಗ್ಯ ಸಿಬ್ಬಂದಿಗೆ ಮಹಿಳೆಯೊಬ್ಬರು ಹಾವು ತೋರಿಸಿ ಹೆದರಿಸಿರುವ ಘಟನೆ ರಾಜಸ್ಥಾನದ ಅಜೇರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಆರೋಗ್ಯ ಸಿಬ್ಬಂದಿ ಮನೆಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಅದರಂತೆ ಒಂದು ಮನೆಗೆ ತೆರಳಿ ಲಸಿಕೆ ಪಡೆಯುವಂತೆ ತಿಳಿಸಿದ್ದಾರೆ. ಆಗ ಮನೆಯ ಮಹಿಳೆ ಕಮಲಾ ದೇವಿ ಎಂಬವರು ಕೈಯಲ್ಲಿ ಬುಟ್ಟಿ ಹಿಡಿದು ಅದರಲ್ಲಿದ್ದ ನಾಗರಹಾವು ತೋರಿಸಿ ಲಸಿಕೆ ಹಾಕಿಸಿಕೊಳ್ಳಲು ನಿರಾಕಿರಿಸಿದ ಘಟನೆ ನಡೆದಿದೆ.

ನನಗೆ ಲಸಿಕೆ ಬೇಡ. ಲಸಿಕೆ ಹಾಕಲು ಮುಂದೆ ಬಂದರೆ ನಿಮ್ಮ ಮೇಲೆ ಹಾವನ್ನು ಬಿಡುತ್ತೇನೆ ಎಂದು ಅವರು ಹೆದರಿಸಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯರೊಂದಿಗೆ ಮಹಿಳೆಯ ಮನವೊಲಿಸಿ ಆರೋಗ್ಯ ಸಿಬ್ಬಂದಿ ಕೊನೆಗೂ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.



Join Whatsapp