ಸೊಂಟಕ್ಕೆ ಮಗು ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ: ಗಂಡ ಸತ್ತ ದಿನವೇ ಮಹಿಳೆ ಆತ್ಮಹತ್ಯೆ

Prasthutha|

ಬೆಂಗಳೂರು: ಮಹಿಳೆಯೊಬ್ಬರು ತನ್ನ 7 ವರ್ಷದ ಮಗುವಿನೊಂದಿಗೆ ಬನ್ನೇರುಘಟ್ಟ ಬಳಿಯ ಸಕಲವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಬೆಂಗಳೂರು ನಗರ ಜಿಲ್ಲೆ ಬನ್ನೇರುಘಟ್ಟ ಬಳಿಯ ಇರುವ ಸಕಲವಾರ ಕೆರೆಗೆ ಮಗುವಿನೊಂದಿಗೆ ಮಹಿಳೆ ಹಾರಿದ್ದಾರೆ.

ವಿಜಯಲಕ್ಷ್ಮೀ(35) ಹಾಗೂ ಮಗ ಹರಿಹರನ್(7) ಮೃತರು.

- Advertisement -

ಆಂಧ್ರ ಮೂಲದ ಸಿಕೆ ಪಾಳ್ಯದಲ್ಲಿ ವಾಸವಿದ್ದ ವಿಜಯಲಕ್ಷ್ಮೀ, ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದಳು. ವಿಜಯಲಕ್ಷ್ಮೀ ಪತಿ ತೀರಿಕೊಂಡು ಇಂದಿಗೆ ಸರಿಯಾಗಿ 2 ವರ್ಷವಾಗಿದೆ. ಪತಿ ಸಾವಿನ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದ ವಿಜಯಲಕ್ಷ್ಮೀ, ಪತಿ ತೀರಿಕೊಂಡ ಸರಿಯಾಗಿ 2 ವರ್ಷದ ದಿನವೇ ಮಗುವಿನ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರತೆಗೆದಿದ್ದಾರೆ.

Join Whatsapp