76ನೇ ಸ್ವಾತಂತ್ರ್ಯೋತ್ಸವ : ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಭರ್ಜರಿ ಸಿದ್ಧತೆ, ಹಲವೆಡೆ ವಾಹನ ನಿಲುಗಡೆ ನಿಷಿದ್ಧ

Prasthutha|

ಬೆಂಗಳೂರು: ಆಗಸ್ಟ್​ 15ರಂದು 76ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಭರ್ಜರಿ ಸಿದ್ಧತೆಗಳು ಶುರುವಾಗಿವೆ. ಜೊತೆಗೆ ಭಾರಿ ಭದ್ರತೆ ಕೈಗೊಳ್ಳಲಾಗುತ್ತಿದೆ.

- Advertisement -

ಕೆಎಸ್​​ಆರ್​ಪಿ, ಸಿಎಆರ್, ಹೋಮ್​ಗಾರ್ಡ್, ಸಂಚಾರಿ ಪೊಲೀಸರು ಸೇರಿದಂತೆ 1350 ಪೊಲೀಸ್ ಸಿಬ್ಬಂದಿ, 38 ತುಕಡಿಗಳು ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್​ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ತಯಾರಿ ಬಗ್ಗೆ ಮಾಹಿತಿ ನೀಡಿದರು.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಕಾರ್ಯಕ್ರಮವಿರಲಿದ್ದು ಭದ್ರತಾ ದೃಷ್ಟಿಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.

- Advertisement -

ಮಾಣಿಕ್ ಶಾ ಪರೇಡ್ ಮೈದಾನದಲ್ಲೇ ನಗರ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಮಾಣಿಕ್ ಶಾ ಪರೇಡ್ ಮೈದಾನದ ಸುತ್ತ 100 ಸಿಸಿಟಿವಿ ಅಳವಡಿಸಲಾಗುತ್ತದೆ. 2 ಬ್ಯಾರೇಜ್ ಸ್ಕ್ಯಾನರ್ ಅಳವಡಿಕೆ, ಮುಂಜಾಗ್ರತಾ ಕ್ರಮವಾಗಿ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜನೆ ಮಾಡಲಾಗುತ್ತೆ ಎಂದರು.

ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯನವರು ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪರೇಡ್ ವೀಕ್ಷಿಸಲಿದ್ದಾರೆ. ಸದ್ಯ ಈಗಾಗಲೇ ಪೆಂಡಾಲ್, ಪೀಠೋಪಕರಣ ಹಾಕಿ ಮೈದಾನದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 3 ದಿನಗಳ ಕಾಲ ಪರೇಡ್ ರಿಹರ್ಸಲ್ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡಗಳ ವಿವರ

ಶ್ರೀಪದ ದೇವರಾಜ್ ತಂಡದಿಂದ ನಾಡಗೀತೆ,ರೈತಗೀತೆ

ವೀರನಮನ- ಕರ್ನಾಟಕ ಪಬ್ಲಿಕ್ ಸ್ಕೂಲ್,ಸಾರಕ್ಕಿ ಮಕ್ಕಳ ತಂಡ

ವೀರಭೂಮಿ ವಿದುರಾಶ್ವತ್ಥ ಧ್ವಜ ಸತ್ಯಾಗ್ರಹ- ಬಿಬಿಎಂಪಿ ಸಂಯುಕ್ತ ಪ.ಪೂ.ಕಾಲೇಜ್,ಹೇರೋಹಳ್ಳಿ

ರೋಪ್ ಸ್ಕಿಪಿಂಗ್-ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ,ಬೈಲಹೊಂಗಲ, ಬೆಳಗಾವಿ

ಕಲಾರಿಪಯಟ್ಟು-ಎಂ.ಇ.ಜಿ ತಂಡ

ಟೆಂಟ್ ಪೆಗ್ಗಿಂಗ್-ಎ.ಎಸ್.ಸಿ ತಂಡ

ಮೋಟಾರ್ ಸೈಕಲ್ ಪ್ರದರ್ಶನ-ಎ.ಎಸ್.ಸಿ.ತಂಡ

ಯಾವ್ಯಾವ ರಸ್ತೆಯಲ್ಲಿ ನಿರ್ಬಂಧ?

ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ

ಕಬ್ಬನ್ ರಸ್ತೆ, ಸಿ.ಟಿ.ಓ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ ವರೆಗೆ

ಎಂ.ಜಿ.ರಸ್ತೆ,ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ

Join Whatsapp