ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯನ್ನು ನಿಂದಿಸಿ ತಳ್ಳಿದ್ದ ಪ್ರಕರಣ: ಬಿಜೆಪಿ ಮುಖಂಡನ ನಿವಾಸದ ಅಕ್ರಮ ನಿರ್ಮಾಣ ನೆಲಸಮ

Prasthutha|

ನವದೆಹಲಿ: ಕಳೆದ ವಾರ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯನ್ನು ನಿಂದಿಸಿ ತಳ್ಳಿದ್ದ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ಅವರ ನಿವಾಸದಲ್ಲಿನ ಅಕ್ರಮ ನಿರ್ಮಾಣವನ್ನು ಬುಲ್ಡೋಜರ್ ಗಳು ನೆಲಸಮಗೊಳಿಸಿದೆ. ಅದರ ವೀಡಿಯೊ ನಂತರ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಬುಲ್ಡೋಜರ್ ಗಾಜಿನ ಛಾವಣಿ ಮತ್ತು ಮರದ ಕಂಬಗಳನ್ನು ಭಾಗಶಃ ನೆಲಸಮಗೊಳಿಸಿದರೆ, ಬುಲ್ಡೋಜರ್ ಪ್ರವೇಶಿಸಲು ಸಾಧ್ಯವಾಗದ ಕಿರಿದಾದ ಪ್ರದೇಶಗಳನ್ನು ಕಾರ್ಮಿಕರು ನೆಲಸಮಗೊಳಿಸುತ್ತಿರುವುದು ವೀಡಿಯೋದಲ್ಲಿ ಕಾಣಬಹುದು.

- Advertisement -

ಹೌಸಿಂಗ್ ಸೊಸೈಟಿಯೊಳಗೆ ಮಹಿಳೆಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ವಿರುದ್ಧ ನೋಯ್ಡಾ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದರು. ಅದರ ವಿಚಾರಣೆಯ ಸಂದರ್ಭದಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ. ಆರೋಪಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೋಯ್ಡಾ ಅಧಿಕಾರಿ ಇಶ್ತಿಯಾಕ್ ಅಹ್ಮದ್, ನೋಯ್ಡಾ ಪ್ರಾಧಿಕಾರದ ಜನರಲ್ ಮ್ಯಾನೇಜರ್ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ಹಾಜರಿದ್ದರು.

ಗ್ರಾಂಡ್ ಓಮೆಕ್ಸ್ ಸೊಸೈಟಿಯಲ್ಲಿ ಈ ಕಟ್ಟಡವಿದ್ದು, ನೆಲತಳದಲ್ಲಿ ವಾಸಿಸುವ ತ್ಯಾಗಿ ಅಕ್ರಮವಾಗಿ ಸಣ್ಣ ಓಣಿಯಲ್ಲಿ ತನ್ನ ಒಳಾಂಗಣವನ್ನು ವಿಸ್ತರಿಸಿಕೊಂಡಿದ್ದ ಎನ್ನಲಾಗಿದೆ.

ಇದರ ನಡುವೆ ಶ್ರೀಕಾಂತ್ ತ್ಯಾಗಿಯ ಕಡೆಯವರು ಗ್ರಾಂಡ್ ಓಮೆಕ್ಸ್ ಸೊಸೈಟಿಯೊಳಗೆ ಆ ಮಹಿಳೆಯ ವಿಳಾಸ ಏನೆಂದು ಹುಡುಕಾಡಿದ್ದಾರೆ. ಇದಾದ ಬೆನ್ನಿಗೆ ಅಕ್ರಮ ಭಾಗ ಡೆಮಾಲಿಶ್ ಮಾಡಲಾಗಿದೆ. ಶ್ರೀಕಾಂತ್ ತ್ಯಾಗಿ ಮೇಲೆ ಹಾಕಿರುವ ಎಫ್ ಐಆರ್ ನಲ್ಲಿ ಗ್ಯಾಂಗ್ ಸ್ಟರ್ ಎಂದೂ ಹಾಕಲಾಗಿದೆ. ಆದರೆ ತ್ಯಾಗಿ ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಮೊದಲೇ ನೋಯ್ಡಾ ಪ್ರಾಧಿಕಾರದ ಎರಡು ಬುಲ್ಡೋಜರ್ ಗಳು ಗ್ರಾಂಡ್ ಓಮೆಕ್ಸ್ ಸೊಸೈಟಿ ಹೊಕ್ಕಿದ್ದವು. ಬುಲ್ಡೋಜರ್ ಒಳ ಹೋಗದ ಕಾರಣ ಕೆಲಸಗಾರರು ಮರದ ಕಂಬಗಳನ್ನು, ಗಾಜಿನ ಭಾಗಗಳನ್ನು ಒಂದಷ್ಟು ಕತ್ತರಿಸಿದರು. ಬುಲ್ಡೋಜರ್ ಗಳು ಒಳ ನುಗ್ಗಿ ಗಾಜಿನ ಸೂರು ಸಹಿತ ವಿಸ್ತರಿಸಿದ ಭಾಗದ ಗೋಡೆಗಳನ್ನು ಕೆಡವಿದವು.

ಪೊಲೀಸ್ ಅಧಿಕಾರಿಗಳೊಂದಿಗೆ ನೋಯ್ಡಾ ಪ್ರಾಧಿಕಾರದ ಯೋಜನಾ ಮಹಾ ನಿರ್ವಾಹಕ ಇಸ್ತಿಯಾಕ್ ಅಹ್ಮದ್ ಅವರು ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಡೆಮಾಲಿಶಿಂಗ್ ಸ್ಥಳದಲ್ಲಿ ಇದ್ದರು.

ಐಶಾರಾಮಿ ವಸತಿ ಪ್ರದೇಶದ ಸಮಾನ ಬಳಕೆ ಪ್ರದೇಶವನ್ನು ತ್ಯಾಗಿ ಆಕ್ರಮಿಸಿಕೊಂಡಿದ್ದ. ಇದನ್ನು ಪ್ರಶ್ನಿಸಿದ ಮಹಿಳೆಗೆ ಬಾಯಿಗೆ ಬಂದಂತೆ ಬಯ್ದು ತ್ಯಾಗಿ ನಿಂದಿಸಿದ್ದ. ಕೈಯಿಂದ ಹಲ್ಲೆ ಕೂಡ ನಡೆಸಿದ್ದ. ಈ ವೀಡಿಯೋ ವೈರಲ್ ಆಗಿತ್ತು.

ಸೊಸೈಟಿಯ ಕಾಮನ್ ಏರಿಯಾದಲ್ಲಿ ತ್ಯಾಗಿ ಎಂಟು ತಾಳೆ ಮರಗಳನ್ನೂ ನೆಟ್ಟಿದ್ದ. ಎರಡು ವರುಷದಿಂದ ಇದು ನಡೆದಿದ್ದು, ಇತರ ವಾಸಿಗಳು ಆತನನ್ನು ಈ ಬಗ್ಗೆ ಪ್ರಶ್ನಿಸುತ್ತಲೇ ಇದ್ದರು. ಈ ಅಕ್ರಮ ಒತ್ತುವರಿ ಬಗ್ಗೆ ಹಲವಾರು ದೂರುಗಳು ಬಂದಿರುವುದಾಗಿ ನೋಯ್ಡಾ ಪ್ರಾಧಿಕಾರದವರೂ ತಿಳಿಸಿದ್ದಾರೆ.   

ಫೇಸ್ ಬುಕ್ ನ 81,000 ಫಾಲೋವರ್ ಗಳು ಮತ್ತು 52,000 ಇನ್ ಸ್ಟಾಗ್ರಾಂ ಫಾಲೋವರ್ ಗಳು ತ್ಯಾಗಿಯು ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಎಂದು ಹೇಳಿವೆ. ಈಗ ಬಿಜೆಪಿ, ಆತ ನಮ್ಮವನಲ್ಲ ಎಂದಿದೆ. 

Join Whatsapp