ಮುಸ್ಲಿಮನೋ, ಹಿಂದೂವೋ ತಿಳಿಯಲು ದಲಿತನನ್ನು ಬಟ್ಟೆ ಬಿಚ್ಚಿ ಅವಮಾನ, ಹಲ್ಲೆ !

Prasthutha|

ಮಧ್ಯಪ್ರದೇಶ: ಕಳ್ಳತನ ಆರೋಪದ ಮೇಲೆ ಮುಸ್ಲಿಮನೋ, ಹಿಂದೂವೋ ಎಂದು ತಿಳಿಯಲು ದಲಿತ ವ್ಯಕ್ತಿಯೊಬ್ಬನನ್ನು ಗುಂಪೊಂದು ಹಲ್ಲೆ ನಡೆಸಿ ಅವಮಾನ ಮಾಡಿರುವ ಘಟನೆ ಖಾರ್ಗೋನ್ ನ ನಿಮ್ರಾಣಿ ಪ್ರದೇಶದ ಬಳಿ ನಡೆದಿದೆ.

- Advertisement -


ಹಲ್ಲೆಗೊಳಗಾದ ವ್ಯಕ್ತಿಯನ್ನು ಆದಿತ್ಯ ರೋಕ್ಡೆ ಎಂದು ತಿಳಿದು ಬಂದಿದೆ. ಆಗಸ್ಟ್ 6ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.


ಘಟನೆ ಬೆಳಕಿಗೆ ಬಂದ ನಂತರ ಕ್ರಿಮಿನಲ್ ಬೆದರಿಕೆ, ಅಕ್ರಮ ಬಂಧನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.



Join Whatsapp