ಇನ್ನೆರಡು ದಿನಗಳಲ್ಲಿ 1 – 5 ನೇ ತರಗತಿಗಳನ್ನು ಪುನರಾರಂಭಿಸುವ ಬಗ್ಗೆ ತೀರ್ಮಾನ | ಬಿ.ಸಿ ನಾಗೇಶ್

Prasthutha|

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಲಾಕ್ ಡೌನ್ ಕಾರಣದಿಂದ ಮುಚ್ಚಲ್ಪಟ್ಟಿದ್ದ ಶಾಲಾ ಕಾಲೇಜು ಗಳು ಹಂತ ಹಂತವಾಗಿ ಪುನರಾರಂಭಗೊಂಡಿದ್ದು, 1 ರಿಂದ 5ನೇ ತರಗತಿಗಳನ್ನು ಪುನರಾರಂಭಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ತೀರ್ಮಾನಿಸಲಾಗುವುದು. ಶನಿವಾರ ಹಾಗೂ ಭಾನುವಾರ ತರಗತಿ ನಡೆಸುವ ಕುರಿತು ಚಿಂತಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

- Advertisement -


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ 1 ರಿಂದ 5ನೇ ತರಗತಿ ಪುನರಾರಂಭ ಕುರಿತಂತೆ ಸಭೆ ನಡೆಯಲಿದೆ. ಸಭೆಯಲ್ಲಿ ತಜ್ಞರು, ಕೊರೊನಾ ಉಸ್ತುವಾರಿಗಳು, ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ನೀಡುವ ಸಲಹೆಯನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.


“ಕೊರೊನಾ ಕಾರಣದಿಂದ ಶಾಲೆ ತಡವಾಗಿ ಪ್ರಾರಂಭವಾಗುತ್ತಿರುವ ಕಾರಣ ಶೈಕ್ಷಣಿಕ ಪಠ್ಯಕ್ರಮ ಕುಂಠಿತಗೊಂಡಿದೆ. ಹಾಗಾಗಿ ಶನಿವಾರ, ಭಾನುವಾರ ತರಗತಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆದರೆ ಪಠ್ಯ ಕಡಿತದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ” ಎಂದು ತಿಳಿಸಿದ್ದಾರೆ.

Join Whatsapp