ವಿಂಬಲ್ಡನ್: ಜಬೇರ್ ಮಣಿಸಿ ಮಹಿಳಾ ಕಿರೀಟ ಗೆದ್ದ ರಿಬಾಕಿನ

Prasthutha|

- Advertisement -

ಪ್ರತಿಷ್ಠಿತ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕಜಕಸ್ತಾನದ ಎಲೆನಾ ರಿಬಾಕಿನ ಚೊಚ್ಚಲ ಚಾಂಪಿಯನ್ ಆಗಿ ಸಂಭ್ರಮಿಸಿದ್ದಾರೆ.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ರಿಬಾಕಿನಾ, ಟ್ಯುನೀಶಿಯಾದ ಆನ್ಸ್‌ ಜಬೇರ್ ವಿರುದ್ಧ 3-6, 6-2, 6-2 ಅಂತರದಲ್ಲಿ ಗೆದ್ದು ದಾಖಲೆ ನಿರ್ಮಿಸಿದರು.
ಉಭಯ ಆಟಗಾರ್ತಿಯರಿಗೂ ಇದು ಮೊದಲ ಗ್ರ್ಯಾನ್ ಸ್ಲಾಮ್ ಫೈನಲ್ ಪಂದ್ಯವಾಗಿತ್ತು. ಟ್ಯುನಿಷಿಯದ ಜಬೇರ್‌ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಆಫ್ರಿಕಾದ ಮತ್ತು ಅರಬ್‌ ದೇಶದ ಮೊದಲ ಮಹಿಳೆ ಎಂಬ ಗೌರವ ತಮ್ಮದಾಗಿಸಿಕೊಂಡಿದ್ದಾರೆ. ಸೆಮಿಫೈನಲ್‌ ಹಣಾಹಣಿಯಲ್ಲಿ ವಿಶ್ವ ಶ್ರೇಯಾಂಕದಲ್ಲಿ 103ನೇ ಸ್ಥಾನದಲ್ಲಿರುವ ಜರ್ಮನಿಯ ಟಾಟನ ಮರಿಯಾ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು. ಅದರೆ ಗ್ರ್ಯಾನ್‌ಸ್ಲಾಮ್‌ ಟ್ರೋಫಿ ಜಯಿಸಿದ ಆಫ್ರಿಕಾದ ಮೊದಲ ಮಹಿಳೆ ಎನಿಸಿಕೊಳ್ಳುವ ಕನಸು ನನಸಾಗಲಿಲ್ಲ.

- Advertisement -

ಮತ್ತೊಂದೆಡೆ ರಷ್ಯಾದಲ್ಲಿ ಹುಟ್ಟಿ ಬೆಳೆದ ರಿಬಾಕಿನ 2018ರ ವರೆಗೂ ಆ ದೇಶವನ್ನು ಪ್ರತಿನಿಧಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕಜಕಸ್ತಾನ ಪರ ಆಡುತ್ತಿದ್ದಾರೆ. ಇದೀಗ ಗ್ರ್ಯಾನ್‌ಸ್ಲಾಮ್‌ ಗೆದ್ದ ಕಜಕಸ್ತಾನದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಕೇವಲ ಎರಡು ಸೆಟ್‌ ಮಾತ್ರ ಕಳೆದುಕೊಂಡಿರುವ ಅವರು ಸೆಮೀಸ್‌ನಲ್ಲಿ 16ನೇ ಶ್ರೇಯಾಂಕಿತೆ, 2019ರ ಚಾಂಪಿಯನ್‌ ಸಿಮೋನಾ ಹಾಲೆಪ್‌ರನ್ನು ನೇರ್ ಸೆಟ್‌ಗಳಲ್ಲಿ ಸೋಲಿಸಿ ಗಮನ ಸೆಳೆದಿದ್ದರು.



Join Whatsapp