ಆಗಸ್ಟ್ 28 ರಂದು ಮೈಸೂರಿನಲ್ಲಿ WIM ರಾಜ್ಯ ಪ್ರತಿನಿಧಿಗಳ ಸಮಾವೇಶ

Prasthutha|

ಬೆಂಗಳೂರು: ವಿಮೆನ್ ಇಂಡಿಯಾ ಮೂವ್ ಮೆಂಟ್ ವತಿಯಿಂದ ರಾಜ್ಯ ಪ್ರತಿನಿಧಿಗಳ ಸಮಾವೇಶ ಹಾಗೂ ‘ಮಹಿಳಾ ಸುರಕ್ಷತೆ ಸ್ವಾತಂತ್ರ್ಯದ ಅಡಿಪಾಯ’ ಎಂಬ ವಿಷಯದಲ್ಲಿ ಆಗಸ್ಟ್ 28 ರಂದು ಮೈಸೂರಿನ ಬನ್ನಿಮಂಟಪ ಸರ್ಕಲ್ ಗೆ ಹತ್ತಿರವಿರುವ ನಲಪಾಡ್ ರೆಸಿಡೆನ್ಸಿಯಲ್ಲಿ ಸಾರ್ವಜನಿಕ ಸಭೆ  ನಡೆಯಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ  ಆಯಿಶಾ ಬಜ್ಪೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ  ಅವರು, ಮಹಿಳೆ ಮನೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯೋಗದ ಸ್ಥಳಗಳಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ . ರಾಜಕೀಯ ಧಾರ್ಮಿಕ ಪ್ರಭಾವ ಬಳಸಿಯು  ಮಹಿಳೆಯ ಮೇಲೆ ಅತ್ಯಾಚಾರಗಳು ನಿರಂತರ ನಡೆಯುತ್ತಿದೆ ಪ್ರತಿ 10 ನಿಮಿಷಕ್ಕೊಂದು ಅತ್ಯಾಚಾರ ವರದಿಯಾಗುತ್ತಿದೆ. ಅಂತರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶಗಳ ಪೈಕಿ ಭಾರತವು ಒಂದನೇ ಸ್ಥಾನದಲ್ಲಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ ದ ಅಂಕಿ ಅಂಶಗಳು ಬೆಚ್ಚಿ ಬೀಳುತ್ತಿದೆ. ಅದರ ಪ್ರಕಾರ ಪ್ರತಿ ವರ್ಷ ಸರಾಸರಿ 30,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಿಸಲ್ಪಡುತ್ತಿದೆ. ಅಲ್ಲದೆ ಪ್ರತಿವರ್ಷ ಸರಾಸರಿ 30,000ಕ್ಕೂ ಹೆಚ್ಚು ಕಿರುಕುಳ ಪ್ರಕರಣಗಳು ಹಾಗೂ 10,000ಕ್ಕೂ ಹೆಚ್ಚು ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳು ದಾಖಲಿಸುತ್ತವೆ. ಇವುಗಳ ಹೊರತಾಗಿ ವರದಿಯಾಗದ ಸಾವಿರಾರು ಪ್ರಕರಣಗಳು ಸಂಭವಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದರ ನಡುವೆ ಇತ್ತೀಚಿನ ಆಘಾತಕಾರಿ ಸಂಗತಿ ಎಂದರೆ 2002 ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕೀಸ್ ಬಾನು ಹಾಗೂ ಆಕೆಯ ಕುಟುಂಬದ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ಗೈದು 7 ಮಂದಿಯನ್ನು ಕ್ರೂರವಾಗಿ ಹತ್ಯೆ ನಡೆಸಿದ ಅಪರಾಧ ಸಾಬೀತಾಗಿ ಶಿಕ್ಷೆ ಘೋಷಿಸಲ್ಪಟ್ಟ ಸಂಘಪರಿವಾರದ ರೇಪಿಸ್ಟ್ ಗಳನ್ನು ಗುಜರಾತ್ ಸರ್ಕಾರ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಗೊಳಿಸಿ ಹೂಹಾರ ಹಾಕಿ ಸ್ವಾಗತಿಸಿದ ಕೃತ್ಯವೂ ಇಡೀ ಸಮಾಜವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಇಂತಹ ಕಿರಾತಕರ ನಡುವೆ ನಾವು ಬದುಕುತ್ತಿದ್ದೇವೆ ಎಂಬ ಜಾಗೃತಿ ಎಲ್ಲಾ ಮಹಿಳೆಯರಲ್ಲಿ ಬೇಕು ಎಂದರು.

- Advertisement -

ಹಸಿವಿನ ಸೂಚ್ಯಂಕದಲ್ಲಿ ವಿಶ್ವದ 134 ದೇಶಗಳ ಪೈಕಿ ಭಾರತವು 102ನೇ ಸ್ಥಾನದಲ್ಲಿದೆ. ಪೋಷಕಾಂಶಗಳ ಕೊರತೆ, ಶಿಶುಮರಣ, ಬಾಣಂತಿ ಸಾವು , ಆಸಿಡ್ ದಾಳಿ, ಬಲವಂತದ ಮದುವೆ, ಲಿಂಗ ತಾರತಮ್ಯ, ಮರ್ಯಾದಾ ಹತ್ಯೆ ಇತ್ಯಾದಿಗಳಲ್ಲಿ ನಮ್ಮ ದೇಶದಲ್ಲಿ ಮಹಿಳೆಯರ ಮಹಿಳೆಯು ನೇರ ಬಲಿಪಶುವಾಗಿದ್ದಾಳೆ. ಆರ್ಥಿಕ ಕುಸಿತ, ಬೆಲೆ ಏರಿಕೆ, ನಿರುದ್ಯೋಗವು ಮಹಿಳೆಯನ್ನು ಹಿಂಡಿ ಹೀರಿದೆ ಎಂದು ಹೇಳಿದರು.

ಭ್ರಷ್ಟಾಚಾರ, ಸ್ವಜನ ಪಕ್ಷಪಾತ  ಗುಂಪು ಹತ್ಯೆ, ಜನಾಂಗೀಯ ದ್ವೇಷ, ಮತಾಂಧತೆ, ಮೂಡನಂಬಿಕೆ ,ನ್ಯಾಯ ನಿರಾಕರಣೆ, ನಕಲಿ ಅನ್ಕೌಂಟರ್ಗಳು, ಜನ ವಿರೋಧಿ ನೀತಿಗಳು, ಖಾಸಗಿಕರಣ, ಕರಾಳ ಕಾನೂನುಗಳು ಮಹಿಳೆಯರನ್ನು ಪ್ರತ್ಯಕ್ಷವಾಗಿಯು ಪರೋಕ್ಷವಾಗಿಯು ಬಲಿಪಶುಗಳನ್ನಾಗಿಸಿದೆ. ಅತ್ಯಾಧುನಿಕ ತಾಂತ್ರಿಕಯುಗದಲ್ಲೂ ಒಟ್ಟು ಮಹಿಳಾ ಸಾಕ್ಷರತೆ 70ಶೇಕಡಾ ಮೀರಿಲ್ಲ. ಅವಳ  ಸುರಕ್ಷಿತ ತೆಯೇ ಸವಾಲಾಗಿ ಪರಿಣಮಿಸಿದೆ. ಆಹಾರ – ಆರೋಗ್ಯ-ವಸತಿ ಭದ್ರತೆಯ ಖಾತ್ರಿಯಿಲ್ಲ. ಲಿಂಗ ತಾರತಮ್ಯ, ದೌರ್ಜನ್ಯ, ಶೋಷಣೆ ಎಗ್ಗಿಲ್ಲದೇ ಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆ ಹೀಗೆ ನಿಂದನಾತ್ಮಕ, ಅಪಮಾನಕರ ಜೀವನ ನಡೆಸಬೇಕಾದವಳಲ್ಲ.  ಅವಳು ಬವಣೆಗಳ ಆಗರವಾಗಿ ಕಣ್ಣೀರ ಕೋಡಿಯಾಗಿ ದುಃಖಗಳನ್ನು ನುಂಗಿ, ಮೌನಿಯಾಗಿರಬೇಕಾದವಳಲ್ಲ. ಅವಳಿಗೂ ಭಾವನೆಗಳಿವೆ. ಗೌರವಾರ್ಹ ಜೀವನದ ಹಕ್ಕುಅವಳಿಗೂ ಇದೆ. ನ್ಯಾಯಯುತ, ಘನತೆಯ ಬದುಕು ಪ್ರತಿಯೋರ್ವ ಮಹಿಳೆಗೂ ಅತ್ಯವಶ್ಯಕವಾಗಿದೆ ಎಂದರು.

ಈ ನಿಟ್ಟಿನಲ್ಲಿ ಸಮಾಜದ ಕಟ್ಟಕಡೆಯ ಮಹಿಳೆಗೆ ನ್ಯಾಯ ಒದಗಿಸಿ ಸಬಲೀಕರಿಸುವ ಉದ್ದೇಶದೊಂದಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ರ್ಯಾ ಲಿ ಜಾಥಾ, ಪ್ರತಿಭಟನೆ, ಮುತ್ತಿಗೆ, ಧರಣಿ, ಪತ್ರಿಕಾಗೋಷ್ಠಿ, ಪ್ರಕಟಣೆಗಳು, ದೂರು ದಾಖಲು, ಹಕ್ಕೊತ್ತಾಯ ಪತ್ರಗಳು, ಭಿತ್ತಿಪತ್ರಗಳು  ಇತ್ಯಾದಿಗಳ ಮೂಲಕ ನಾವು ಸರಕಾರದ ಗಮನ ಸೆಳೆದಿರುತ್ತೇವೆ. ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ, ಕಾನೂನು ಸಹಕಾರ ನೀಡುತ್ತಾ ಬಂದಿದ್ದೇವೆ. ಜಾಗೃತಿ ಸಭೆಗಳು, ವಿಚಾರಗೋಷ್ಠಿಗಳು, ಕರಪತ್ರ ವಿತರಣೆ, ವಿಡಿಯೋ, ಬಿತ್ತಿಪತ್ರ ಪ್ರದರ್ಶನ ಇತ್ಯಾದಿಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಸಾಂವಿಧಾನಿಕ ಹೋರಾಟಗಳು ಮತ್ತು ಶೈಕ್ಷಣಿಕ- ಆರ್ಥಿಕ-ರಾಜಕೀಯ ಪ್ರಬುದ್ಧತೆಯ ಮೂಲಕ ಸಬಲೀಕರಣ ಸಾಧ್ಯವೆಂಬುದನ್ನು ನಾವು ನಂಬಿರುತ್ತೇವೆ ಎಂದು ತಿಳಿಸಿದರು.

ಆದ್ದರಿಂದ ತಾರೀಕು 28/8/2022 ರಂದು ಮೈಸೂರಿನ ಬನ್ನಿಮಂಟಪ ಸರ್ಕಲ್ ಗೆ ಹತ್ತಿರವಿರುವ ನಲಪಾಡ್ ರೆಸಿಡೆನ್ಸಿಯಲ್ಲಿ   ರಾಜ್ಯ ಪ್ರತಿನಿಧಿ ಸಭೆಯು ನಡೆಯಲಿದ್ದು ಬೆಳಿಗ್ಗೆ 10:30ಕ್ಕೆ  ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿರುವುದು.  ಒಂದು ದಿನದ ಈ ಸಭೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ವಿಮ್ ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.  ಮುಂದಿನ ಅವಧಿಗೆ   ರಾಜ್ಯ ಸಮಿತಿ ಹಾಗೂ  ರಾಜ್ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ. ಸಂಜೆ 4.30 ಕ್ಕೆ ‘ಮಹಿಳಾ ಸುರಕ್ಷತೆ ಸ್ವಾತಂತ್ರ್ಯದ ಅಡಿಪಾಯ’ ಎಂಬ ವಿಷಯದಲ್ಲಿ  ಸಾರ್ವಜನಿಕ ಸಭೆಯು ನಡೆಯಲಿರುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ  ಆಯಿಶಾ ಬಜ್ಪೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp