ವಿದ್ಯಾರ್ಥಿ‌ ಸಮಸ್ಯೆಗಳನ್ನು ಬಗೆಹರಿಸಲು ಹಿಂದೇಟು ಹಾಕುತ್ತಿರುವ ಮಂಗಳೂರು ವಿವಿ : ಶೀಘ್ರ ಪರಿಹಾರಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

Prasthutha|

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುವ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಪ್ರತಿಕ್ರಯಿಸಲು  ಹಿಂದೇಟು ಹಾಕುತ್ತಿರುವ ಕುರಿತು  ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ನೀಡಲು  ವಿಶ್ವವಿದ್ಯಾಲಯಕ್ಕೆ ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾ ದ.ಕ ಜಿಲ್ಲಾ ಸಮಿತಿ ಆಗ್ರಹಿಸಿದೆ.

- Advertisement -

ವಿಶ್ವವಿದ್ಯಾಲಯದಲ್ಲಿ ಸಮಸ್ಯೆಗಳ ಆಗರವಾಗಿದ್ದು, ಪರೀಕ್ಷೆಯ ಫಲಿತಾಂಶ ನೀಡದೆ, ಅಂಕ ಪಟ್ಟಿ ನೀಡದೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ನೀಡುತ್ತಿರುವ ಅಂಕಪಟ್ಟಿಯಲ್ಲಿ ಅನೇಕ ತಪ್ಪುಗಳು, ಕೆಲವರ ಅಂಕ ಪಟ್ಟಿ‌ ನೀಡದೆ ಇರುವುದು, ಫಲಿತಾಂಶದಲ್ಲಿ ತಾಂತ್ರಿಕ ಸಮಸ್ಯೆ, ಮರು ಮೌಲ್ಯಮಾಪನ ತುಂಬಾ ತಡವಾಗಿ ಆರಂಭಿಸುವುದು, ಮರು ಮೌಲ್ಯಮಾಪನದ ಮರುಪಾವತಿ ಮಾಡದೇ ಇರುವುದು, ಪರೀಕ್ಷಾ ದಿನಾಂಕವನ್ನು ತಿಂಗಳ ಮುಂಚಿತವಾಗಿ ನೀಡದೆ ಇರುವುದು, ಪರೀಕ್ಷಾ ಶುಲ್ಕ ಪ್ರತಿಬಾರಿಯೂ ಹೆಚ್ಚು ಮಾಡುತ್ತಿದ್ದು, SC,ST ವಿದ್ಯಾರ್ಥಿಗಳಿಗೆ ಇನ್ನೂ ಮಂಜೂರಾಗದ ಲಾಪ್ ಟಾಪ್ ಗಳು, ಎಸ್ಸಿ ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಮುಂತಾದ ಸಮಸ್ಯೆಗಳು ಇಂದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕಂಟಕವಾಗುತ್ತಿದೆ.ಇಷ್ಟೆಲ್ಲಾ ಸಮಸ್ಯೆಗಳು ನಡೆಯುತ್ತಿರುವುದರ ನಡುವೆಯೇ ಮಂಗಳೂರು ವಿವಿಯಿಂದ ಶಿರವಸ್ತ್ರದ ನೆಪದಲ್ಲಿ ಕಿರುಕುಳ ನೀಡಿದ್ದರಿಂದ 16% ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದುಕೊಂಡಿದ್ದು ಹಾಗೂ ಇತರ ಧರ್ಮದ ಆಚರಣೆಗಳಿಗೆ ವಿವಿ ಅವಕಾಶ ಮಾಡಿಕೊಡುತ್ತಿರುವುದರ ಮುಖಾಂತರ ತಾರತಮ್ಯ ಎಸಗುತ್ತಿದ್ದು ತೀವ್ರ ಖಂಡನೀಯವಾಗಿದೆ.

ಇಂತಹ ಗಂಭೀರ ಸಮಸ್ಯೆಗಳನ್ನು ಮಂಗಳೂರು ವಿವಿ ವಿದ್ಯಾರ್ಥಿಗಳು ಎದುರಿಸುತ್ತಿದ್ದು ಹಲವಾರು ಭಾರಿ ವಿದ್ಯಾರ್ಥಿಗಳು ಮನವಿ ಮಾಡಿದರೂ,ಹೋರಾಟ ನಿರತರಾದರೂ ಸಮಸ್ಯೆ ಬಗೆಹರಿಸಲು ವಿವಿ ಕುಲಪತಿಗಳು ಹಿಂದೇಟು ಹಾಕುತ್ತಿದ್ದಾರೆ. ಶೀಘ್ರ ಈ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ತೀವ್ರ ಹೋರಾಟವನ್ನು ಮಂಗಳೂರು ವಿವಿ ಎದುರಿಸಬೇಕಾದಿತು ಎಂದು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಎಚ್ಚರಿಸಿದ್ದಾರೆ.

Join Whatsapp