ಅನಿಯಂತ್ರಿತ ಬೆಲೆ ಏರಿಕೆಯ ವಿರುದ್ಧ ಅಂಕತ್ತಡ್ಕದಲ್ಲಿ WIM ಪ್ರತಿಭಟನೆ

Prasthutha|

ಮಂಗಳೂರು: ವಿಮೆನ್ ಇಂಡಿಯಾ ಮೂವ್ ಮೆಂಟ್ (WIM) ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸರ್ಕಾರದ ಅನಿಯಂತ್ರಿತ ಬೆಲೆ ಏರಿಕೆಯ ವಿರುದ್ಧ ಅಂಕತ್ತಡ್ಕ ಜಂಕ್ಷನ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

- Advertisement -

ಅಣಕು ಪ್ರದರ್ಶನದ ಮೂಲಕ ಪ್ರತಿಭಟನಾ ಸಭೆಯನ್ನು ಆರಂಭಿಸಲಾಯಿತು.

ವಿಮೆನ್ ಇಂಡಿಯಾ ಮೂವ್ಮೆಂಟ್  ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ  ನಸ್ರಿಯಾ ಬೆಳ್ಳಾರೆ  ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಯಿಂದ ಹಾಗೂ ಅನಿಯಂತ್ರಿತ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಬದುಕಲು ಕಷ್ಟವಾಗಿದೆ. ಈ ಸರಕಾರವನ್ನು ದೇಶದಿಂದ ನಿರ್ಮೂಲನೆ ಮಾಡಬೇಕು ಎಂದರು.

- Advertisement -

ಪ್ರತಿಭಟನೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷೆ  ಸಬೀನಾ ಅಂಕತ್ತಡ್ಕ ಸ್ವಾಗತಿಸಿ,  ಕಾರ್ಯದರ್ಶಿ ಅನ್ ಶಿಫಾ ಬೆಳ್ಳಾರೆ  ನಿರೂಪಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಸಮಿತಿ ಸದಸ್ಯರಾದ ಸಮೀನಾ ಬೆಳ್ಳಾರೆ, ಮಿಸ್ರಿಯಾ ಅಂಕತಡ್ಕ  ಮತ್ತಿತರರು ಉಪಸ್ಥಿತರಿದ್ದರು.

Join Whatsapp